Friday, April 26, 2024
spot_imgspot_img
spot_imgspot_img

ಪತ್ರಕರ್ತರ ಸಮಸ್ಯೆಯ ಬಗ್ಗೆಯೂ ಒಂಚೂರು ಆಲಿಸಿ

- Advertisement -G L Acharya panikkar
- Advertisement -

ಕೊರೊನಾ ಮೊದಲ ಅಲೆ ಮತ್ತು ಎರಡನೆಯ ಅಲೆಯ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಜೀವದ ಹಂಗನ್ನು ತೊರೆದು ಕೊರೊನಾ ವಾಸ್ತವ ಸ್ಥಿತಿ, ಗತಿಗಳ ಸುದ್ದಿಯನ್ನು ಪ್ರಕಟಿಸಿ ಸರ್ಕಾರದ ಕಣ್ಣು ತೆರೆಸಿ, ಪ್ರಾಮಾಣಿಕ ಕೆಲಸ ಮಾಡುವುದಲ್ಲದೇ ಸೋಂಕಿತರಿರುವ ಸ್ಥಳಗಳಿಗೆ ತೆರಳಿ ಅವರಿಗೆ ಆಗುವ ಅನೂಕೂಲ ಮತ್ತು ಅನಾನೂಕೂಲ ಬಗ್ಗೆ ತಿಳಿದು ಅವರಿಗೆ ಬೇಕಾದ ಸೌಲಭ್ಯ ತಲುಪಿಸಲು ವ್ಯವಸ್ಥೆಯನ್ನು ಮಾಡುತ್ತಾರೆ.

ಪತ್ರಕರ್ತರು ನಿತ್ಯ ಸಾರ್ವಜನಿಕರ ಬಗ್ಗೆ ಜವಬ್ದಾರಿಯುಳ್ಳ ಕೆಲಸ ಮಾಡುತ್ತಾರೆ. ಪತ್ರಕರ್ತರು ಯಾವುದೇ ಫಲಾಪೇಕ್ಷವಿಲ್ಲದೇ ಸಾರ್ವಜನಿಕ ರಂಗದಲ್ಲಿ ದುಡಿಯುತ್ತಾರೆ. ಅಂತಹ ಪತ್ರಕರ್ತರಿಗೆ ಮತ್ತು ಅವರ ಕುಟುಂಬಗಳಿಗೆ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಾದರು ಸರ್ಕಾರದ ಗಮನಕ್ಕೆ ಯಾಕೆ ಬರುತ್ತಿಲ್ಲ ಎಂಬುದು ಶೋಚನೀಯ.

ಮಹಾಮಾರಿಯನ್ನು ಲೆಕ್ಕಿಸದೆ ನಿತ್ಯ ಸಮಾಜಕ್ಕಾಗಿ ದುಡಿದು ಅದೆಷ್ಟೋ ಪತ್ರಕರ್ತರು ಕಷ್ಟಪಡುತ್ತಿದ್ದರು ಅವರ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲ. ಪತ್ರಕರ್ತರು ಮತ್ತು ಅವರ ಕುಟುಂಬಗಳು ಅಭದ್ರತೆಯಲ್ಲಿದ್ದರೂ ಅವರ ಕಡೆಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಅವರು ಯಾವ ಪಾಪ ಮಾಡಿದ್ದಾರೆ. ವಿವಿಧ ವಲಯದ ಬಗ್ಗೆ ತಿಳಿಸುವ ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಕೊಡಬೇಕು ಅಂತಾ ಯಾಕೆ ಮನಸ್ಸು ಮಾಡಿಲ್ಲ ಎಂಬುವುದು ಯಕ್ಷ ಪ್ರಶ್ನೆಯಾಗಿದೆ.

driving

ಅಭದ್ರತೆಯಲ್ಲಿ ಕೆಲಸ ಮಾಡುತ್ತಿರುವ ಮಾಧ್ಯಮದ ಸ್ನೇಹಿತರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಅದೆಷ್ಟೋ ಜನ ಪತ್ರಕರ್ತರ ಸಾವಿರಾರು ಕುಟುಂಬಗಳು ಕುಟುಂಬದ ಆಧಾರವಾಗಿದ್ದ ವ್ಯಕ್ತಿಯನ್ನು ಕೆಳದುಕೊಂಡು ಅನಾಥವಾಗಿದೆ. ಬೀದಿ ಪಾಲಾದ ಕುಟುಂಬಗಳ ನೋವಿನ ಧ್ವನಿ ಸರ್ಕಾರಕ್ಕೆ ಕೇಳುತ್ತಿಲ್ಲ ಎನ್ನುವುದೆ ವಿಪರ್ಯಾಸ. ವಿವಿಧ ರಂಗದಲ್ಲಿ ಅಸಂಘಟಿತವಾಗಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೂ ಪ್ಯಾಕೇಜ್ ನೀಡದಿರುವುದು ಪತ್ರಿಕಾ ರಂಗದಲ್ಲಿರುವ ಸ್ನೇಹಿತರಿಗೆ ನಿರಾಶೆಯಾಗಿದೆ. ಸರ್ಕಾರ ತಕ್ಷಣವೇ ಪತ್ರಕರ್ತರ ನೋವನ್ನು ತಿಳಿದುಕೊಂಡು ಅವರಿಗೂ ಪ್ಯಾಕೇಜ್ ಬಿಡುಗಡೆ ಮಾಡಲಿ ಎಂಬ ಅಭಿಪ್ರಾಯ ಮಾಧ್ಯಮ ರಂಗದಿಂದ ಕೇಳಿ ಬರುತ್ತದೆ

- Advertisement -

Related news

error: Content is protected !!