Sunday, June 14, 2026
spot_imgspot_img
spot_imgspot_img

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

- Advertisement -
- Advertisement -

ಉದಯಪುರ ಸಿಟಿ-ಜೈಪುರ್ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ರಾಜಾಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ.

ಕಲ್ಲು ತೂರಾಟದಿಂದ ರೈಲಿನ ಕಿಟಕಿಯ ಗಾಜು ಪುಡಿಯಾಗಿದ್ದು ಯಾವುದೇ ಪ್ರಯಾಣಿಕರು ಅಥವಾ ರೈಲು ಸಿಬ್ಬಂದಿ ಗಾಯಗೊಂಡಿಲ್ಲ ಎಂದು ವರದಿಯಾಗಿದೆ.

ರಾಯಲ ನಿಲ್ದಾಣದ ಮೂಲಕ ರೈಲು ಹಾದು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬರು ರೈಲು ಮೇಲೆ ಕಲ್ಲು ಎಸೆದಿದ್ದು, ಸಿ7 ಕೋಚ್‌ನ ಕಿಟಕಿಗೆ ಹಾನಿಯಾಗಿದೆ ಎಂದು ಚಿತ್ತೋರ್‌ಗಢ ಜಿಆರ್‌ಪಿ ನಿಲ್ದಾಣದ ಛೋಟುಲಾಲ್ ತಿಳಿಸಿದ್ದಾರೆ. ರಾಯಲ ಠಾಣಾಧಿಕಾರಿಗಳ ವರದಿ ಆಧರಿಸಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!