Saturday, June 6, 2026
spot_imgspot_img
spot_imgspot_img

ಏರ್ ಗನ್‌ನಲ್ಲಿ ಆಟ ಆಡುವಾಗ ಮಿಸ್ ಫೈರ್‍; ಬಾಲಕ ಸಾವು..!

- Advertisement -
- Advertisement -

ಏರ್ ಗನ್‌ನಲ್ಲಿ ಆಟವಾಡುವಾಗ ಮಿಸ್ ಫೈರ್‍ ಆಗಿ 7 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿ ನಡೆದಿದೆ.

ಮೃತಪಟ್ಟ ಬಾಲಕ ಮೃತ ಬಾಲಕ ವಿಷ್ಣು (7) ಎಂದು ಗುರುತಿಸಲಾಗಿದೆ.

ಏರ್ ಗನ್ ಇಟ್ಟುಕೊಂಡು ಆಟ ಆಡುವಾಗ ಬಾಲಕ ಟ್ರಿಗರ್ ಒತ್ತಿದ್ದಾನೆ. ಗನ್ ಮಿಸ್ ಫೈರ್ ಆಗಿ ಗುಂಡು ಬಾಲಕನ ದೇಹದೊಳಗೆ ಹೊಕ್ಕಿದೆ ಎಂದು ತಿಳಿದು ಬಂದಿದೆ. ಕಾಫಿ ತೋಟದಲ್ಲಿ ಮಂಗಗಳನ್ನು ಓಡಿಸಲು ಬಳಸುವ ಏರ್ ಗನ್ ಜೊತೆ ವಿಷ್ಣು ಮನೆ ಮುಂದೆ ಆಟವಾಡುತ್ತಿದ್ದ ಈ ಸಂದರ್ಭ ವಿಷ್ಣು ಆಕಸ್ಮಿಕವಾಗಿ ಟ್ರಿಗರ್ ಒತ್ತಿದ್ದಾನೆ. ಇದರಿಂದ ಎರ್ ಗನ್ ಫೈರ್ ಆಗಿದ್ದು, ನೇರವಾಗಿ ಗನ್‌ನೊಳಗಿದ್ದ ಬಾಲ್ಸ್ ವಿಷ್ಣುವಿನ ಹೃದಯ ಭಾಗಕ್ಕೆ ಹೊಕ್ಕಿದೆ.

ಪೋಷಕರು ಮನೆಯಲ್ಲಿ ಇದ್ದಾಗಲೇ ಈ ದುರ್ಘಟನೆ ಸಂಭವಿಸಿದೆ. ಮೃತದೇಹವನ್ನು ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!