Friday, July 24, 2026
spot_imgspot_img
spot_imgspot_img

ನಮ್ಮದು ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಗಾಗಿ ಹೋರಾಟ-ಮಿಥುನ್ ರೈ

- Advertisement -
- Advertisement -

ಮಂಗಳೂರು: ಅದಾನಿ ಸಂಸ್ಥೆಗೆ ಹಸ್ತಾಂತರಿಸಲ್ಪಟ್ಟ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈಗ ಅದಾನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮರುನಾಮಕರಣಗೊಂಡಿದೆ. ಇದನ್ನು ಈ ಕೂಡಲೇ ಕೋಟಿ ಚೆನ್ನಯ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ತಿದ್ದುಪಡಿ ಮಾಡಬೇಕು. ಅದು ಇಂದಿನಿಂದಲೇ ಜಾರಿಯಾಗಬೇಕು.ಇದು ತುಳು ನಾಡಿನ ಜನರ ಹಕ್ಕು ಎಂದು ದ.ಕ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥುನ್ ರೈ ಯವರು ಆಗ್ರಹಿಸಿದ್ದಾರೆ.

ನಾವು ನಮ್ಮ ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ಜನರ ಹಿತಾಸಕ್ತಿಗಾಗಿ ಹೋರಾಟ ಮಾಡುತ್ತಿದ್ದೇವೆ.
ಅಲ್ಲದೆ ಇದು ಅನುಷ್ಠಾನವಾಗುವವರೆಗೂ ಆಮರಣ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮುಂದುವರೆಸಿ ಬಿ ಜೆ ಪಿ ಯವರು ಈ ಪ್ರಸ್ತಾವನೆಯನ್ನು ಏಕೆ ತಿರಸ್ಕರಿಸಿಸುತ್ತಿದ್ದಿರಿ? ಒಂದು ವೇಳೆ ನೀವು ಇದರ ಪರವಾಗಿದ್ದರೆ ಇದುವರೆಗೆ ನಿಮ್ಮಿಂದ ಯಾವುದೇ ಕ್ರಮ ಕೈಗೊಳ್ಳಲು ಏಕೆ ಸಾಧ್ಯವಾಗಲಿಲ್ಲ ಎಂದು ಜಿಲ್ಲೆಯ ಸಂಸದ ಮತ್ತು ಬಿಜೆಪಿ ರಾಜ್ಯಧ್ಯಕ್ಷರಾದ ನಳಿನ್ ಕುಮಾರ್ ಕಟೀಲುರವರನ್ನು ನೇರವಾಗಿ ಪ್ರಶ್ನಿಸಿದ್ದಾರೆ.

- Advertisement -

Related news

error: Content is protected !!