Wednesday, April 24, 2024
spot_imgspot_img
spot_imgspot_img

ಗದ್ದೆಗಿಳಿದು ನೇಜಿ ನೆಟ್ಟ ಶಾಸಕ ಡಾ.ಭರತ್ ಶೆಟ್ಟಿ ವೈ

- Advertisement -G L Acharya panikkar
- Advertisement -

ಮಂಗಳೂರು: ಹಡೀಲು ಗದ್ದೆಯಲ್ಲಿ ಕೃಷಿಗೆ ಉತ್ತೇಜನ ನೀಡುತ್ತಿರುವ ಮಂಗಳೂರು ನಗರ ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಅವರು ಸುರತ್ಕಲ್ ರಥಬೀದಿಯಲ್ಲಿರುವ ಬಾಕಿಮಾರು ಗದ್ದೆಗೆ ಇಳಿದು ಇತರರೊಂದಿಗೆ ತಾವೂ ನೇಜಿ ನೆಟ್ಟು ಸಂಭ್ರಮಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಮಣ್ಣಿನ ಸಂಪ್ರದಾಯವನ್ನು ಉಳಿಸುವ ಕೆಲಸವನ್ನು ಸ್ಥಳೀಯರು ಮತ್ತು ಈ ಪ್ರದೇಶದ ದೇವಳಗಳ ಭಕ್ತರು ಮಾಡುತ್ತಿದ್ದು ಇದು ಪ್ರಶಂಸನೀಯ, ಗದ್ದೆಯನ್ನು ಉಳಿಸಿಕೊಂಡು ಮುಂದೆಯೂ ನಿರಂತರವಾಗಿ ಈ ಕಾಯಕ ಇಲ್ಲಿ ಮಾತ್ರವಲ್ಲದೆ ಎಲ್ಲೆಡೆಯೂ ನಡೆಯಬೇಕು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ತಾವು ಹಡೀಲು ಭೂಮಿಯನ್ನು ಗುರುತಿಸಿ ಭತ್ತ ನಾಟಿಗೆ ಕ್ರಮಕೈಗೊಂಡಿದ್ದು ಕೃಷಿ ಕಾರ್ಯ ಪ್ರಗತಿಯಲ್ಲಿದೆ. ಇದರ ಜತೆಗೆ ಕೃಷಿ ಕಾರ್ಯಕ್ಕೆ ಎಲ್ಲೆಡೆ ಉತ್ತೇಜನ ಸಿಗುವಂತೆ ಪ್ರೋತ್ಸಾಹವನ್ನು ಸರಕಾರವೂ ನೀಡುತ್ತಿದೆ ಎಂದು ಹೇಳಿದರು.

ನವದುರ್ಗಾ ಫ್ರೆಂಡ್ಸ್ ಸರ್ಕಲ್ ,ತ್ರೈರೂಪಿಣಿ ಮಹಿಳಾ ಮಂಡಳಿ ಸದಸ್ಯರು ನಾಟಿ ಕಾಯಕದಲ್ಲಿ ಕೈಜೋಡಿಸಿದರು.

- Advertisement -

Related news

error: Content is protected !!