Wednesday, June 17, 2026
spot_imgspot_img
spot_imgspot_img

ಯೋಧನ ಮನೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ದೀಪಾವಳಿ ಆಚರಣೆ

- Advertisement -
- Advertisement -

ಬಂಟ್ವಾಳ: ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ನರಿಕೊಂಬು ಗ್ರಾಮದ ನಾಟಿ ಸಜಂಕಪಲಿಕೆಯ ಯೋಧ ನಾಗೇಶ ರವರ ಮನೆಯಲ್ಲಿ ದೀಪಾವಳಿಯನ್ನು ಆಚರಿಸಲಾಯಿತು.

ಶಾಸಕ ರಾಜೇಶ್ ನಾಯ್ಕ್ ರವರು ದೀಪ ಬೆಳಗಿಸಿ ಶುಭ ಹಾರೈಸಿ ಕರ್ತವ್ಯದಲ್ಲಿದ್ದ ಯೋಧ ನಾಗೇಶ್ ರವರೊಂದಿಗೆ ವಿಡಿಯೋ ಕರೆಯ ಮೂಲಕ ಮಾತನಾಡಿ ದೀಪಾವಳಿಯ ಶುಭಾಶಯ ತಿಳಿಸಿದರು. ಬಳಿಕ ಮನೆಯವರೊಂದಿಗೆ ಮಾತನಾಡಿ ದೇಶ ಸೇವೆ ಗೈಯ್ಯುವ ಯೋಧರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು  ನಮ್ಮೆಲ್ಲರಿಗೆ ನೀಡಿದ ಪ್ರೇರಣೆಯ ಈ ಕಾರ್ಯಕ್ರಮ ಸಂತೋಷ ತಂದಿದೆ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ,ಬೂಡ ಅಧ್ಯಕ್ಷರಾದ ದೇವದಾಸ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಕಾರ್ಯದರ್ಶಿಗಳಾದ ರಮಾನಾಥ ರಾಯಿ, ಸೀತಾರಾಮ ಪೂಜಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಯುವ ಮೋರ್ಚಾದ ಸುದರ್ಶನ್ ಬಜ,ಸುರೇಶ್ ಕೋಟ್ಯಾನ, ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಯಶೋಧರ ಕರ್ಬೆಟ್ಟು, ಪ್ರಮುಖರಾದ ಕಿಶೋರ್ ಶೆಟ್ಟಿ ,ಪ್ರೇಮನಾಥ ಶೆಟ್ಟಿ, ಸುರೇಂದ್ರ, ಲೋಕೇಶ್ ನಾಟಿ, ನಾರಾಯಣ ಪೂಜಾರಿ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!