Friday, April 26, 2024
spot_imgspot_img
spot_imgspot_img

ಭಾರತ-ಸ್ವೀಡನ್ ಶೃಂಗಸಭೆ: ತಂತ್ರಜ್ಞಾನ, ಸಂಶೋಧನೆ ಮತ್ತು ಹೂಡಿಕೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕಿದೆ- ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ಭಾರತ ಮತ್ತು ಸ್ವೀಡನ್ ದೇಶಗಳು ವಿಡಿಯೋ ಕಾನ್ಫರೆನ್ಸ್​ ಮೂಲಕ ಶೃಂಗಸಭೆ ನಡೆಸಿದವು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ವೀಡನ್ ಪ್ರಧಾನಿ ಸ್ಟೆಫನ್ ಎರಡೂ ದೇಶಗಳನ್ನ ಉದ್ದೇಶಿಸಿ ಮಾತನಾಡಿದರು.

ಪ್ರಧಾನಿ ಮೋದಿಯವರು ಮಾತನಾಡಿ ಭಾರತ ಮತ್ತು ಸ್ವಿಡನ್ ಸ್ನೇಹ ತುಂಬಾ ಆಳವಾಗಿದ್ದು ಹಲವಾರು ಕ್ಷೇತ್ರಗಳಲ್ಲಿ ಪಾರ್ಟ್ನರ್​​ಶಿಪ್ ಹೊಂದಿವೆ. ಸ್ಮಾರ್ಟ್​ ಸಿಟಿ, ಇ-ಮೊಬಿಲಿಟಿ, ಸ್ಮಾರ್ಟ್​​ ಗ್ರಿಡ್ಸ್​ ಮತ್ತು ವೇಸ್ಟ್​ ಮ್ಯಾನೆಜ್ಮೆಂಟ್, ​ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಂಟಿಯಾಗಿ ಪಾಲುದಾರಿಕೆ ಹೊಂದಿವೆ ಎಂದು ತಿಳಿಸಿದರು.

ಆದರೆ ಇನೋವೇಷನ್, ಟೆಕ್ನಾಲಜಿ, ಇನ್ವೆಸ್ಟ್​​ಮೆಂಟ್, ಸ್ಟಾರ್ಟ್​ ಅಪ್, ರಿಸರ್ಚ್​ ಮತ್ತು ಹೂಡಿಕೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕಿದೆ, ಅದಕ್ಕೆ ನಮ್ಮ ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಕಾನೂನಿನ ನಿಯಮ, ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದಂತಹ ಮೌಲ್ಯಗಳು ಎರಡೂ ದೇಶಗಳ ನಡುವಿನ ಸಂಬಂಧ ಮತ್ತು ಪರಸ್ಪರ ಸಹಕಾರ ಅಭಿವೃದ್ಧಿಯನ್ನ ಬಲಪಡಿಸುತ್ತವೆ ಎಂದರು.

ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಹವಾಮಾನದಲ್ಲಿನ ಬದಲಾವಣೆಗಳನ್ನ ಎದುರಿಸಲು ಎರಡೂ ದೇಶಗಳು ಅವಶ್ಯಕವಾಗಿ ಒಟ್ಟಿಗೆ ಕೆಲಸ ಮಾಡಬೇಕು. ನಾವು ಪ್ಯಾರಿಸ್ ಒಪ್ಪಂದಂತೆ ನಡೆದುಕೊಳ್ಳುತ್ತಿದ್ದೇವೆ. ಪರಿಸರದೊಂದಿಗೆ ಸಾಮರಸ್ಯದಿಂದ ಬದುಕುವುದು ಭಾರತೀಯ ಸಂಸ್ಕೃತಿ ಎಂದು ಬಣ್ಣಿಸಿದರು.

ಸ್ವೀಡನ್​ನಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ದಾಳಿಯನ್ನ ಖಂಡಿಸಿದ ಮೋದಿ, ಎಲ್ಲಾ ಭಾರತೀಯ ನಾಗರಿಕರ ಪರವಾಗಿ ಸ್ವೀಡನ್‌ನ ಜನರೊಂದಿಗೆ ಐಕಮತ್ಯ ಮತ್ತು ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಇಂದು ಹಾರೈಸಿದರು. ಅಲ್ಲದೇ ಕೊರೊನಾದಿಂದ ಪ್ರಾಣ ಕಳೆದುಕೊಂಡ ಜನತೆಗೆ ವಿಷಾದ ವ್ಯಕ್ತಪಡಿಸಿ, ಸಂತಾಪ ಸೂಚಿಸಿದರು.

- Advertisement -

Related news

error: Content is protected !!