- Advertisement -
- Advertisement -
ಉಡುಪಿ: ಪ್ರಧಾನಿ ನರೇಂದ್ರ ಮೋದಿ ತಮ್ಮ 72ನೇ ಆವೃತ್ತಿಯ ಮನ್ ಕಿ ಬಾತ್ನಲ್ಲಿ ಉಡುಪಿಯ ನವದಂಪತಿಯ ಸ್ವಚ್ಛತಾ ಅಭಿಯಾನದ ಬಗ್ಗೆ ಪ್ರಸ್ತಾಪಿಸಿ ಅಭಿನಂದಿಸಿದರು.

ನವದಂಪತಿಗಳ ಬೀಚ್ ಕ್ಲೀನಿಂಗ್ ಕಾರ್ಯಕ್ಕೆ ಮೋದಿ ಶ್ಲಾಘಿಸಿದರು. ಬೈಂದೂರು ನಿವಾಸಿ ಅನುದೀಪ್ ಹಾಗೂ ಮಿನುಷಾ ಹನಿಮೂನ್ ಸಂಭ್ರಮದಲ್ಲೂ ಸಾಮಾಜಿಕ ಕಳಕಳಿ ಮೆರೆದಿದ್ದರು. ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಅನುದೀಪ್ ಕೆಲಸ ಮಾಡುತ್ತಿದ್ದರೆ, ಫಾರ್ಮಾಸ್ಯುಟಿಕಲ್ ಉದ್ಯೋಗದಲ್ಲಿ ಮಿನುಷಾ ಇದ್ದಾರೆ.

ಇವರು ನವೆಂಬರ್ 18ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಹನಿಮೂನ್ ತೆರಳೋ ಮೊದಲು ಏಳು ದಿನಗಳ ಕಾಲ ಈ ದಂಪತಿ ಬೀಚ್ ಕ್ಲೀನ್ ಮಾಡಿತ್ತು. ಬೈಂದೂರು ತಾಲೂಕಿನ ಸೋಮೇಶ್ವರ ಕಡಲ ಕಿನಾರೆಯನ್ನ ಕ್ಲೀನ್ ಮಾಡಿತ್ತು. ಸಮುದ್ರತೀರದಲ್ಲಿ 7 ದಿನಗಳ ಕಾಲ 700 ಮೀಟರ್ ಸ್ವಚ್ಛಗೊಳಿಸಿ 500 ಕೆಜಿ ಕಸ ಸಂಗ್ರಹ ಮಾಡಿದ್ದರು.




- Advertisement -








