- Advertisement -
- Advertisement -
ನವದೆಹಲಿ: ಫೆ.21 ರಂದು ಅಂತಾರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆಯ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಂಸತ್ನ ಎಲ್ಲಾ ಸದಸ್ಯರಿಗೆ ಪತ್ರ ಬರೆದಿದ್ದು, ನಿಮ್ಮ ಮಾತೃ ಭಾಷೆಗಳಿಗೆ ಪ್ರೋತ್ಸಾಹ ನೀಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಮೊದಲ ಬಾರಿ ಕಲಿತ ಮತ್ತು ಆಡಿದ ಮಾತೃ ಭಾಷೆ ಜೀವನದ ಆತ್ಮವಿದ್ದಂತೆ ಎಂದು ಬಣ್ಣಿಸಿರುವ ವೆಂಕಯ್ಯ ನಾಯ್ಡು ರವರು, ಅನೌಪಚಾರಿಕ ಕಲಿಕೆಯ ಆರಂಭಿಕ ವರ್ಷಗಳಲ್ಲಿ ಮನೆಯಲ್ಲೇ ಕಲಿತ ಭಾಷೆಯ ಕೌಶಲ್ಯಗಳಲ್ಲಿ ಬಲವಾದ ಅಡಿಪಾಯವಿರುತ್ತೆ ಎಂದು ಮಾತೃ ಭಾಷೆಯ ಮಹತ್ವವನ್ನು ತಿಳಿಸಿದ್ದಾರೆ.

ಜಗತ್ತಿನೊಂದಿಗೆ ಮಗು ತೆರೆದುಕೊಳ್ಳಲು ಮಾತೃ ಭಾಷೆ ಮೊದಲ ಕಿಟಕಿಯಾಗಿದ್ದು, ಭಾಷೆಯ ಅಡೆತಡೆಗಳನ್ನು ತೆಗೆದುಹಾಕುವ ಮೂಲಕ ಮಕ್ಕಳ ಸೃಜನಶೀಲ ಸಾಮರ್ಥ್ಯಗಳು ಅಭಿವೃದ್ಧಿ ಪಡಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

- Advertisement -








