Friday, April 26, 2024
spot_imgspot_img
spot_imgspot_img

ಮದುವೆಗೆ ಪೋಷಕರ ನಿರಾಕರಣೆ – ಅಪ್ರಾಪ್ತ ಬಾಲಕಿಯ ಅಪಹರಣ

- Advertisement -G L Acharya panikkar
- Advertisement -

ಮೈಸೂರು: ಮದುವೆಗೆ ಮನೆಯವರು ನಿರಾಕರಿಸಿದರು ಎಂದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಣ ಮಾಡಿರುವ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದ್ದು, ಅಪ್ರಾಪ್ತ ವಯಸ್ಸಿನ ಬಾಲಕಿಯ ಪೋಷಕರು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

3 ತಿಂಗಳ ಹಿಂದೆಯಷ್ಟೇ ಯುವಕನೋರ್ವನ ಬಾಲಕಿಯ ಮನೆಗೆ ಬಂದು ಮಗಳನ್ನು ಮದುವೆ ಮಾಡಿಕೊಡಿ ಎಂದು ಕೇಳಿದ್ದಾರೆ. ಆದರೆ ಬಾಲಕಿಗೆ ಇನ್ನೂ 15 ವರ್ಷ ಆಗಿದೆಯಷ್ಟೆ ಹಾಗಾಗಿ ನಾವು ಮದುವೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ಮನೆಯವರು ಹೇಳಿದ್ದಾರೆ.

ಈ ವೇಳೆ ಯುವಕನ ಮನೆಯವರು, ಮದುವೆ ಮಾಡಿಕೊಡದಿದ್ದರೆ, ನೀವು ಪರಿಣಾಮ ಎದುರಿಸುತ್ತೀರಿ ಎಂದು ಅಪ್ರಾಪ್ತೆಯ ಪೋಷಕರಿಗೆ ಬೆದರಿಕೆ ಹಾಕಿ ಹೋಗಿದ್ದರು. ಇದಾಗಿ ಫೆ.17ರಂದು ಬಾಲಕಿ ನಾಪತ್ತೆಯಾಗಿದ್ದಾಳೆ. ಪೋಷಕರು ನಿರಂತರವಾಗಿ ಬಾಲಕಿಗಾಗಿ ಹುಡುಕಾಡಿದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.

ಯುವಕನ ಪೋಷಕರು ತಾವು ಬೆದರಿಕೆ ಹಾಕಿದಂತೆಯೇ ಬಾಲಕಿಯನ್ನು ಅಪಹರಿಸಿ ತಮ್ಮ ಮನೆಯಲ್ಲಿರಿಸಿಕೊಂಡಿದ್ದಾರೆ ಎಂದು ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!