Thursday, July 23, 2026
spot_imgspot_img
spot_imgspot_img

ಮೈಸೂರು: ಆತಂಕ‌ಮೂಡಿಸಿದ ಅನುಮಾನಾಸ್ಪದ ಸೂಟ್ ಕೇಸ್!

- Advertisement -
- Advertisement -

ಮೈಸೂರು: ಅನುಮಾನಾಸ್ಪದವಾದ ಸೂಟ್ ಕೇಸ್ ನಗರದಲ್ಲಿ ಕೆಲ ಕಾಲ ಆತಂಕ‌ಮೂಡಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಸಿದ್ದಪ್ಪ ವೃತ್ತದ ಬಳಿ ಇರುವ ಬ್ಯಾಂಕ್ ನ ಎಟಿಎಂ ಬಳಿ ಸೂಟ್ಕೇಸ್ ಒಂದು ಅನುಮಾನಾಸ್ಪದವಾಗಿ ಕಂಡುಬಂದಿದ್ದು, ಸಾರ್ವಜನಿಕರು ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಬಾಂಬ್ ಪತ್ತೆ ದಳದೊಂದಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸ್ಥಳೀಯರು ಗಾಬರಿಯಾಗಿದ್ದರು. ಅನುಮಾನಾಸ್ಪದವಾಗಿ ಬ್ಯಾಂಕ್ ಮುಂದೆ ಇದ್ದ ಸೂಟ್ ಕೇಸನ್ನು ಬಾಂಬ್ ಪತ್ತೆ ದಳ ಪರಿಶೀಲಿಸಿದಾಗ ಅದರಲ್ಲಿ ಬಲ್ಬ್​ ಇರುವುದು ತಿಳಿದು ಬಂದಿದೆ.

- Advertisement -

Related news

error: Content is protected !!