Friday, March 29, 2024
spot_imgspot_img
spot_imgspot_img

*ಪ್ರಧಾನಿ ನರೇಂದ್ರ ಮೋದಿ ಹಚ್ಚಿದ್ದ ದೀಪ ಹೊಸ ದಾಖಲೆ*

- Advertisement -G L Acharya panikkar
- Advertisement -

ನವದೆಹಲಿ: ಕೊರೋನಾ ಲಾಕ್ ಡೌನ್ ವೇಳೆ ಕೊರೋನಾ ವಾರಿಯರ್ಸ್’ಗೆ ಧನ್ಯವಾದ ತಿಳಿಸಲು ಏಪ್ರಿಲ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಚ್ಚಿದ್ದ ದೀಪ ಈಗ ಭಾರೀ ಸುದ್ದಿ ಮಾಡಿದೆ. ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ ಸರಿಯಾಗಿ ದೀಪ ಹಚ್ಚುವಂತೆ ದೇಶದ ಸಮಗ್ರ ಜನರಿಗೆ ಮೋದಿ ಕರೆನೀಡಿದ್ದರು.

ಅಂದೇ ಪ್ರಧಾನಿ ಮೋದಿಯವರು ತಾವು ದೀಪ ಹಚ್ಚುವ ಫೋಟೋವೊಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು.

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಟ್ವೀಟ್ ಇದೀಗ ಹೊಸ ದಾಖಲೆ ಬರೆದಿದೆ. ಮೋದಿಯವರ ಟ್ವೀಟ್ 1 ಲಕ್ಷದ 18 ಸಾವಿರ ಮಂದಿ ರಿ ಟ್ವೀಟ್ ಮಾಡಿದ್ದಾರೆ. ಏಪ್ರಿಲ್ 5 ರಂದು ರಾಜಕೀಯ ನಾಯಕರು, ಸಿನಿಮಾ ಗಣ್ಯರು ಸೇರಿದಂತೆ ಅನೇಕರು ದೀಪ ಬೆಳಗಿಸುವ ಫೋಟೋ ಹಂಚಿಕೊಂಡಿದ್ದರು.

- Advertisement -

Related news

error: Content is protected !!