Tuesday, June 23, 2026
spot_imgspot_img
spot_imgspot_img

ಒಡಿಯೂರು: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ದ.ಕ ವಿಟ್ಲ ಸ್ಥಳೀಯ ಸಂಸ್ಥೆಯ ಉತ್ಸವ

- Advertisement -
- Advertisement -

ಒಡಿಯೂರು: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ದಕ್ಷಿಣ ಕನ್ನಡ ವಿಟ್ಲ ಸ್ಥಳೀಯ ಸಂಸ್ಥೆಯ ಉತ್ಸವ ಕಾರ್ಯಕ್ರಮ ಶ್ರೀ ಗುರುದೇವ ದತ್ತ ಸಂಸ್ಥಾನ ಒಡಿಯೂರು ಇಲ್ಲಿ ನಡೆಯಿತು.

ಶ್ರೀ ಗುರುದೇವ ದತ್ತ ಸಂಸ್ಥಾನ ಒಡಿಯೂರು ಇಲ್ಲಿನ ಪರಮಪೂಜ್ಯ ಶ್ರೀ ಗುರುದೇವನಂದಾ ಸ್ವಾಮೀಜಿಯವರು ತಮ್ಮ ದಿವ್ಯ ಹಸ್ತದಿಂದ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ನಾವು ದೇಶ ಸಂಸ್ಕೃತಿ ಜನರಲ್ಲಿ ಪ್ರೀತಿ ಇಡಬೇಕು ಕೌಶಲ್ಯ ಪೂರ್ಣವಾದ ಬದುಕು ನಮ್ಮಲ್ಲಿರಬೇಕು ನಾಯಕತ್ವ ಮತ್ತು ಶಿಸ್ತನ್ನು ಮೂಡಿಸುವ ಸಂಸ್ಥೆ ಸ್ಕೌಟ್ ಗೈಡ್ ಸಂಸ್ಥೆ ಎನ್ನುತ್ತಾ ದೇಶ ಕಾಯುವ ಸೈನಿಕ ಮತ್ತು ಅನ್ನ ನೀಡುವ ರೈತರಿಗೆ ಸದಾ ಗೌರವವಿರಲಿ ಎಂದು ಮಕ್ಕಳಿಗೆ ತಿಳಿಸಿದರು.

ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಸುದರ್ಶನ್ ಪಡಿಯರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಜಯರಾಮ್ ಬಲ್ಲಾಳ್, ಶ್ರೀಮತಿ ಪುಷ್ಪ, ಒಡಿಯೂರು ಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ, ಸಂಚಾಲಕ ಸೇರಜೆ ಗಣಪತಿ ಭಟ್, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಶುಭಂಗಿ ಚಿಂದೆ, ಗೈಡ್ ಶಿಕ್ಷಕಿ ಶ್ರೀಮತಿ ನೀರಜಾ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರತೀಪ್ ಉಪಸ್ಥಿತರಿದ್ದರು.

ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರತೀಪ್ ಕಾರ್ಯಕ್ರಮ ಸ್ವಾಗತಿಸಿ, ಸ್ಥಳೀಯ ಸಂಸ್ಥೆಯ ಸ್ಕೌಟ್ ಪ್ರತಿನಿಧಿ ನಾರಾಯಣ ನಾಯಕ್ ನಿರೂಪಿಸಿದರು. ಶ್ರೀಮತಿ ಜಯಶ್ರೀ ಧನ್ಯವಾದಗೈದರು.

- Advertisement -

Related news

error: Content is protected !!