Friday, April 26, 2024
spot_imgspot_img
spot_imgspot_img

ಒಂದು ದೇಶ-ಒಂದು ಚುನಾವಣೆಯ ಅಗತ್ಯ ಇದೆ – ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ದೇಶದಾದ್ಯಂತ ಪ್ರತೀ ತಿಂಗಳೂ ಚುನಾವಣೆಗಳು ನಡೆಯುತ್ತಿವೆ. ಇವು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಿವೆ. ಬೇರೆ ಬೇರೆ ಚುನಾವಣೆಗಳಿಗೆ ಮತದಾರರ ಪಟ್ಟಿಯನ್ನ ವಿಂಗಡಿಸುವುದರಿಂದ ಸಮಯ ಮತ್ತು ಸಂಪನ್ಮೂಲಗಳು ಹಾಳಾಗುತ್ತಿವೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಅವರು 80ನೇ ಆಲ್ ಇಂಡಿಯಾ ಪ್ರೆಸೈಡಿಂಗ್ ಆಫೀಸರ್ಸ್ ಕಾನ್ಫರೆನ್ಸ್ ನ್ನು ಉದ್ದೇಶಿಸಿ ಮಾತನಾಡುವ ವೇಳೆ ಮತ್ತೊಮ್ಮೆ ‘ಒಂದು ದೇಶ-ಒಂದು ಚುನಾವಣೆ’ಯ ಪ್ರಾಮುಖ್ಯತೆಯನ್ನ ವಿವರಿಸಿದ್ದಾರೆ.

ನಮ್ಮ ದೇಶದಲ್ಲಿ ಚರ್ಚೆಯಾಗಲೇಬೇಕಾದ ಅಗತ್ಯವಾದ ವಿಚಾರವೊಂದಿದೆ. ಅದೇ ಒಂದು ದೇಶ-ಒಂದು ಚುನಾವಣೆ. ಪ್ರತೀ ಕೆಲವು ತಿಂಗಳಿಗೊಮ್ಮೆ ದೇಶದ ಯಾವುದಾದರೊಂದು ರಾಜ್ಯದಲ್ಲಿ ಚುನಾವಣೆ ಎದುರಾಗುತ್ತದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ ಎಂದು ನಿಮಗೂ ತಿಳಿದಿದೆ. ಇದಕ್ಕಾಗಿ ನಾವು ಒಂದು ದೇಶ-ಒಂದು ಚುನಾವಣೆಯ ವಿಚಾರವನ್ನು ಗಂಭೀರವಾಗಿ ಚರ್ಚಿಸಬೇಕಿದೆ. ಲೋಕಸಭೆ, ವಿಧಾನಸಭೆ ಮತ್ತು ಇತರ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿಯನ್ನು ಬಳಸುವಂತಾಗಬೇಕಿದೆ ಎಂದರು.

  ಈಗ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಅವಕಾಶವಿದೆ. ಈ ಮೊದಲು ಕೆಲವು ಬದಲಾವಣೆಗಳಿದ್ದವು. ಈಗ ಎಲ್ಲವೂ  ಸ್ಪಷ್ಟವಾಗಿವೆ. ಸಂಪೂರ್ಣ ಡಿಜಿಟಲೀಕರಣಕ್ಕೆ ಇದು ಸುಸಮಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

- Advertisement -

Related news

error: Content is protected !!