Monday, July 6, 2026
spot_imgspot_img
spot_imgspot_img

‘ಸಿ ಎಂ’ ಗಳ ಜೊತೆಗೆ ‘ಪಿ ಎಂ’ ಸಭೆ.

- Advertisement -
- Advertisement -

ನವದೆಹಲಿ: ಇಂಗ್ಲೆಂಡ್​​ನಲ್ಲಿ ರೂಪಾಂತರ ಹೊಂದಿದ ಹೊಸ ಕೊರೊನಾ ವೈರಸ್​​ ಪತ್ತೆಯಾದ ಹಿನ್ನೆಲೆ ವಿಶ್ವದಾದ್ಯಂತ ಸೋಂಕಿನ ಎರಡನೇ ಅಲೆ ಹಬ್ಬುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿ, ದೇಶದ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಭೆ ನಡೆಸಲು ಮುಂದಾಗಿದ್ದಾರೆ.

ಡಿಸೆಂಬರ್‌ 25ರಂದು ಬೆಳಗ್ಗೆ 11 ಗಂಟೆಗೆ ಮೋದಿ ಸಭೆ ನಡೆಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂರೆ ದೇಶದ‌ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಈ ವಿಡಿಯೋ ಕಾನ್ಫರೆನ್ಸ್‌ನಲ್ಲಿ

ಭಾಗಿಯಾಗಲಿದ್ದಾರೆ.

- Advertisement -

Related news

error: Content is protected !!