




ಏಪ್ರಿಲ್ 5, ಆದಿತ್ಯವಾರದಂದು ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 7 ಗಂಟೆಯಿಂದ ಗಣಪತಿ ಹೋಮ, ಅಂಕುರಪೂಜೆ, ಶ್ರೀ ಮಹಾಗಣಪತಿ, ಶ್ರೀ ಚಕ್ರ, ಶ್ರೀ ಶಾಸ್ತಾರ, ಶ್ರೀ ನಾಗ ದೇವರು, ಶ್ರೀ ಧೂಮಾವತಿ ಹಾಗೂ ಕೊರತಿ ದೈವಗಳಿಗೆ ಕಲಶಾಭಿಷೇಕ, ಶಾಂತಿ ಪ್ರಾಯಶ್ಚಿತ್ತ ಹೋಮಾದಿಗಳು, ತತ್ವ ಹೋಮ, ತತ್ವಕಲಶ ಪೂಜೆ, ಕುಂಭೇಶ ಕಲಶ ಪೂಜೆ, ಕರ್ಕರಿ ಕಲಶ ಪೂಜೆ, ಅಗ್ನಿಜನನ, ಸೋಪಾನ ಪೂಜೆ ಹಾಗೂ ಶ್ರೀ ಶಿವಪಂಚಾಕ್ಷರಿ ಮತ್ತು ಶ್ರೀ ಶಕ್ತಿ ಪಂಚಾಕ್ಷರಿ ಹವನ ನಡೆಯಲಿದೆ.
ಸಂಜೆ 5 ಗಂಟೆಯಿಂದ ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮ ಕುಂಭ ಪೂರಣೆ, ದ್ರವ್ಯಕಲಶ ಪೂರಣೆ, ಪರಿಕಲಶ ಪೂರಣೆ, ಅಧಿವಾಸ ಹೋಮ, ಬ್ರಹ್ಮಕಲಶ ಪೂಜೆ, ಅಧಿವಾಸ ಬಲಿ, ಕಲಶಾಧಿವಾಸ, ಮಹಾಬಲಿ ಪೀಠಾಧಿವಾಸ ಮತ್ತು ಸೋಪಾನ ಪೂಜೆಗಳು ನೆರವೇರಲಿವೆ.
ಬೆಳಿಗ್ಗೆ 8.30ರಿಂದ 10.30ರವರೆಗೆ ಶ್ರೀ ಗುರುದೇವ ಭಜನಾ ಮಂಡಳಿ, ಒಡಿಯೂರು ಮತ್ತು ಶ್ರೀ ಭಾರತಿ ಸೇವಾ ಸಮಿತಿ, ಕುಡ್ಪಲ್ತಡ್ಕ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 9.30ರಿಂದ “ಪದ್ಯಾಣ ವೈಭವ” ಕಾರ್ಯಕ್ರಮ ಜರುಗಲಿದೆ.
ಮಧ್ಯಾಹ್ನ 1.30ರಿಂದ ಅರವಿಂದ ರಮೇಶ್ ಕೊಮ್ಮೆ ಅವರಿಂದ “ಕೊಳಲು ಮತ್ತು ಪಿಟೀಲು ಕಛೇರಿ” ನಡೆಯಲಿದ್ದು, ಮೃದಂಗದಲ್ಲಿ ಕು. ಶ್ರಾವ್ಯ ತಲಕಳ ಸಹಕರಿಸಲಿದ್ದಾರೆ.
ಮಧ್ಯಾಹ್ನ 2.30ರಿಂದ ವಿದುಷಿ ಶ್ರೀಮತಿ ಸ್ಮಿತಾ ಶ್ರೀಪತಿ ಹಾಗೂ ಅವರ ತಂಡ ಅರ್ಥ ನೃತ್ಯ ಕಲಾಮಂದಿರ- ಬೆಂಗಳೂರು ಇದರ ವಿದ್ಯಾರ್ಥಿನಿಯರಿಂದ ”ಭರತನಾಟ್ಯ ಕಾರ್ಯಕ್ರಮ” ಮತ್ತು “ನವದುರ್ಗಾ ವೈಭವಂ” ಎಂಬ ನೃತ್ಯ ರೂಪಕ ಪ್ರದರ್ಶನ ನಡೆಯಲಿದೆ.
ಸಂಜೆ 4.30ರಿಂದ ಸುಧರ್ಮ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಹಾಗೂ ಗುರುಪುರದ ಶ್ರೀ ವಜ್ರದೇಹಿ ಮಠದ ಪರಮಪೂಜ್ಯ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಹಟ್ಟಿಯಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಬಾಲಚಂದ್ರ ಭಟ್ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ನೇಪಾಳದ ಕಾಠ್ಮಂಡುವಿನ ಶ್ರೀ ಪಶುಪತಿನಾಥ ದೇವಸ್ಥಾನದ ವಿಶ್ರಾಂತ ಪ್ರಧಾನ ಅರ್ಚಕರಾದ ಶ್ರೀ ರಘುರಾಮ ಕಾರಂತ ವಹಿಸಲಿದ್ದು, ಸುವರ್ಣ ನ್ಯೂಸ್ ಕನ್ನಡ ಇದರ ಪ್ರಧಾನ ಸಂಪಾದಕರಾದ ಅಜಿತ್ ಹನುಮಕ್ಕನವರ್ ಧಾರ್ಮಿಕ ಉಪನ್ಯಾಸವನ್ನು ನೀಡಲಿದ್ದಾರೆ ಮತ್ತು ಇನ್ನಿತರ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಜೆ 7 ಗಂಟೆಯಿಂದ ಶ್ರೀಮತಿ ಶಿವಶ್ರೀ ಸ್ಕಂದ ಪ್ರಸಾದ್, ಬೆಂಗಳೂರು ಇವರಿಂದ “ಶಿವಪದ ಯಾನ” ಕಾರ್ಯಕ್ರಮ ನಡೆಯಲಿದೆ.








