




ಪದ್ಯಾಣ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಲಿಂಗೆಶ್ವರ, ಶ್ರೀ ಚಕ್ರ ಹಾಗೂ ಶ್ರೀ ಮಹಾಗಣಪತಿ ದೇವರ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಾರ್ಚ್ 30ರಿಂದ ಏಪ್ರಿಲ್ 6ರವರೆಗೆ ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವೈಭವದಿಂದ ನಡೆಯಲಿದೆ.
ಮಾರ್ಚ್ 30 ಸೋಮವಾರದಂದು ಬೆಳಿಗ್ಗೆಯಿಂದಲೇ ವೈದಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಸಂಜೆ 4 ಗಂಟೆಗೆ ತಂತ್ರಿಗಳ ಕ್ಷೇತ್ರಾಗಮನ ಮತ್ತು ಪೂರ್ಣಕುಂಭ ಸ್ವಾಗತ ನಡೆಯಲಿದೆ. ಸಂಜೆ 5ರಿಂದ ಶಿಲ್ಪಿ ಮೇಸ್ತ್ರಿಗಳಿಂದ ಪರಿಗ್ರಹ, ದೇವತಾ ಪ್ರಾರ್ಥನೆ, ಆಚಾರ್ಯಾದಿ ಋತ್ವಿಗ್ವರಣೆ, ಸ್ವಸ್ತಿ ಪುಣ್ಯಾಹವಾಚನ, ಖನನಾದಿ ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ಅಂಕುರಾರೋಹಣ, ಅಸ್ತ್ರಕಲಶ ಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾಬಲಿ, ನೂತನ ಶಾಸ್ತಾರ ಲಿಂಗಗಳ ಜಲಾಧಿವಾಸ, ಪ್ರಾಕಾರ ಬಲಿ ಹಾಗೂ ರಾತ್ರಿ ಪೂಜೆಗಳು ನಡೆಯಲಿವೆ .
ಬೆಳಿಗ್ಗೆ 8.30ರಿಂದ 10.30ರವರೆಗೆ ಶ್ರೀ ರಾಮ ಭಜನಾ ಮಂಡಳಿ, ಕುರುಡಪದವು ಹಾಗೂ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ, ಕಣಿಯೂರು ಇವರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. 10.30ರಿಂದ ಮಧ್ಯಾಹ್ನ 12ರವರೆಗೆ ಶ್ರೀಮತಿ ಪಾರ್ವತಿ ಪದ್ಮನಾಭ ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಲಿದೆ.
ಸಂಜೆ 3.30ಕ್ಕೆ ಗ್ರಾಮ ದೈವಸ್ಥಾನ ಮಿತ್ತನಡ್ಕ ಶ್ರೀ ಮಲರಾಯ ದೈವಸ್ಥಾನದ ಸನ್ನಿಧಿಯಿಂದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ವಿವಿಧ ಮಠಾಧೀಶರು, ಗಣ್ಯರು ಹಾಗೂ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನೃತ್ಯ ಭಜನಾ ತಂಡಗಳು, ಕೇರಳ ಚೆಂಡೆ, ಸಾಂಸ್ಕೃತಿಕ ಹಾಗೂ ಜಾನಪದ ನೃತ್ಯ ವೈಭವದೊಂದಿಗೆ ಆಕರ್ಷಕ ಹಸಿರುವಾಣಿ ಮೆರವಣಿಗೆ ನಡೆಯಲಿದೆ. ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಗುರುದೇವದತ್ತ ಸಂಸ್ಥಾನಂ, ಒಡಿಯೂರು ಇವರು ನೆರವೇರಿಸಲಿದ್ದಾರೆ.
ಸಂಜೆ 4.30ರಿಂದ ಸುಧರ್ಮ ಸಭೆಯು ಬಿಲ್ವ ಮಂಟಪ ಸಭಾ0ಗಣ , ಶಿವಾನುಗ್ರಹವೇದಿಕೆಯಲ್ಲಿ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದ0ಗಳವರು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀಮದ್ ಎಡನೀರು ಮಠ ನೆರವೇರಿಸಲಿದ್ದು, ಆಶೀರ್ವಚನವನ್ನು ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ಶ್ರೀ ಸಂಪುಟ ನರಸಿಂಹಸ್ವಾಮಿ ಮಠ, ಸುಬ್ರಹ್ಮಣ್ಯ, ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು, ಪರಮಪೂಜ್ಯ ಯೋಗಿ ಕೌಸ್ತುಭ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಶ್ರೀಧಾಮ ಮಾಣಿಲ ಹಾಗೂ ಪರಮಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಕಣಿಯೂರು ನೀಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮುಗುಳಿ ತಿರುಮಲೇಶ್ವರ ಭಟ್, ಆಡಳಿತ ಮೋಕ್ತೆಸರರು, ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನ ಮತ್ತು ಶ್ರೀ ಮಲರಾಯ ದೈವಸ್ಥಾನ, ಕರೋಪಾಡಿ ಅವರು ವಹಿಸಲಿದ್ದಾರೆ. ಈ ಸಭೆಯಲ್ಲಿ ಹಲವು ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಜೆ 7 ಗಂಟೆಯಿಂದ ಜೂನಿಯರ್ ಶಂಕರ್ ಮತ್ತು ಬಳಗದವರಿಂದ ಗಿಲಿಗಿಲಿ ಮ್ಯಾಜಿಕ್ ಕಾರ್ಯಕ್ರಮ ನಡೆಯಲಿದೆ.
ಮಾರ್ಚ್ 31 ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ ಬೆಳಗಿನ ಪೂಜೆ, ಗಣಪತಿ ಹೋಮ, ಅಂಕುರ ಪೂಜೆ, ವೇದ ಪಾರಾಯಣಾದಿಗಳ ಆರಂಭ, ಕ್ಷಾಲನಾಧಿ ಸಪ್ತಶುದ್ಧಿ, ಪ್ರೋಕ್ತ ಪ್ರಾಯಶ್ಚಿತ್ತ ಹೋಮಗಳು, ಹೋಮಕಲಶಾಭಿಷೇಕ, ಚಂಡಿಕಾಯಾಗ, ಸಾಮೂಹಿಕ ಸೌಂದರ್ಯ ಲಹರಿ ಪಾರಾಯಣ ಹಾಗೂ ಮಧ್ಯಾಹ್ನ ಪೂಜೆಗಳು ನಡೆಯಲಿವೆ.
ಸಂಜೆ 5 ಗಂಟೆಯಿಂದ ಅಂಕುರಪೂಜೆ, ರಾತ್ರಿ ಪೂಜೆ, ಶ್ರೀ ದುರ್ಗಾ ಪೂಜೆ, ಅನುಜ್ಞಾಕಲಶ ಪೂರಣೆ ಹಾಗೂ ಅಧಿವಾಸ ಹೋಮಗಳು ನಡೆಯಲಿವೆ.
ಬೆಳಿಗ್ಗೆ 8.30ರಿಂದ 10.30ರವರೆಗೆ ಶ್ರೀ ರಾಘವ ರಾಮ ಭಜನಾ ತಂಡ (ಕನ್ಯಾನ ವಲಯ) ಹಾಗೂ ಕುರುಡಪದವು ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 9 ಗಂಟೆಯಿಂದ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ “ಶಿವಭಕ್ತ ವೀರಮಣಿ” ಪ್ರಸಂಗ ನಡೆಯಲಿದೆ. ಮಧ್ಯಾಹ್ನ 2.30ರಿಂದ ಶ್ರೀಮತಿ ನಯನ ಗೌರಿ ಸೆರಾಜೆ ಬಳಗದಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಲಿದೆ.
ಸಂಜೆ 4.30ರಿಂದ ಸುಧರ್ಮ ಸಭೆಯಲ್ಲಿ ಮಾತೃಸಂಗಮ ಕಾರ್ಯಕ್ರಮ ನಡೆಯಲಿದೆ. ಆಶೀರ್ವಚನವನ್ನು ಶ್ರೀ ಗುರುದೇವದತ್ತ ಸಂಸ್ಥಾನ, ಒಡಿಯೂರು ಇಲ್ಲಿನ ಪರಮಪೂಜ್ಯ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ಅವರು ನೀಡಲಿದ್ದು, ಕರೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸೂರ್ಯಕಾಂತಿ ದೀಪಪ್ರಜ್ವಲನೆ ನೆರವೇರಿಸಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 7 ಗಂಟೆಯಿಂದ, ಪದಯಾನ ತಂಡದವರಿಂದ ‘ನೃತ್ಯಾಂಜಲಿ’ ಭರತನಾಟ್ಯ ಪ್ರದರ್ಶನ ನಡೆಯಲಿದ್ದು, ವಿದುಷಿ ಶ್ರೀಮತಿ ಪ್ರಣತಿ ಚೈತನ್ಯ ಪದ್ಯಾಣ ಹಾಗೂ ವಿದುಷಿ ಶ್ರೀಮತಿ ಚೈತ್ರ ಈಶಾನ್ಯ ಪದ್ಯಾಣ ನಿರ್ದೇಶನ ನೀಡಲಿದ್ದಾರೆ. ರಾತ್ರಿ 9 ಗಂಟೆಯಿಂದ ಲಕ್ಷ್ಮಿ ಗುರುರಾಜ್ ಎನ್.ಎನ್.ಯು. (ರಿ.)ಉಡುಪಿ ತಂಡದಿಂದ “ಶಿವಸಂಭೂತ” ನೃತ್ಯ ನಾಟಕ ಪ್ರದರ್ಶನ ನಡೆಯಲಿದ್ದು, ನಾಟ್ಯಮಯೂರಿ ವಿದುಷಿ ಶ್ರೀಮತಿ ಲಕ್ಷ್ಮಿ ಗುರುರಾಜ್ ಉಡುಪಿ ನಿರ್ದೇಶನ ಮಾಡಲಿದ್ದಾರೆ.
ಏಪ್ರಿಲ್ 1, ಬುಧವಾರ ಬೆಳಿಗ್ಗೆ 7 ಗಂಟೆಯಿಂದ ಬೆಳಗಿನ ಪೂಜೆ, ಗಣಪತಿ ಹೋಮ, ಅಂಕುರಪೂಜೆ, ಶಾಂತಿ, ಶ್ವಶಾಂತಿ, ಚೋರಶಾಂತಿ, ಅದ್ಭುತ ಶಾಂತಿ ಹೋಮಾದಿಗಳು, ಹಾಗೂ ಹೋಮ ಕಲಶಾಭಿಷೇಕ, ಸೃಷ್ಟಿ ತತ್ತ್ವ ಹೋಮ, ಕಲಶಾಭಿಷೇಕ ಹಾಗೂ ಮಧ್ಯಾಹ್ನ ಪೂಜೆ ನಡೆಯಲಿದೆ. ಸಂಜೆ 5 ಗಂಟೆಯಿಂದ ಅಂಕುರಪೂಜೆ, ಶಯ್ಯಾಮಂಟಪ ಸಂಸ್ಕಾರ, ರಾತ್ರಿ ಪೂಜೆ ಹಾಗೂ ಅನುಜ್ಞಾ ಬಲಿ ಕಾರ್ಯಕ್ರಮಗಳು ಜರುಗಲಿವೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಿಗ್ಗೆ 8.30ರಿಂದ 10.30ರವರೆಗೆ ಶ್ರೀ ಅಯ್ಯಪ್ಪ ಭಜನಾ ಮಂಡಳಿ ಕುರುಡಪದವು ಮತ್ತು ಶ್ರೀ ರಾಮ ಭಜನಾ ಮಂಡಳಿ ಪಲ್ಲದಕೋಡಿ ಇವರಿಂದ ಭಜನೆ ನಡೆಯಲಿದೆ.
ಬೆಳಿಗ್ಗೆ 9.30ರಿಂದ ಶ್ರೀ ವಿಷ್ಣು ಯಕ್ಷಬಳಗ ಮಜಿಬೈಲು ಮಂಜೇಶ್ವರ ಇವರಿಂದ “ಇಂದ್ರಜಿತು ಕಾಳಗ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಮಧ್ಯಾಹ್ನ 1.30ರಿಂದ ಶ್ರೀಮತಿ ಅದಿತಿ ಕೊಂಕೋಡಿ ಮತ್ತು ಬಳಗದವರಿಂದ “ಕರ್ನಾಟಕ ಶಾಸ್ತ್ರೀಯ ಸಂಗೀತ” ಕಾರ್ಯಕ್ರಮ, ಮಧ್ಯಾಹ್ನ 2.30ರಿಂದ ವಿದುಷಿ ಡಾ. ನಿಶಿತಾ ಪುತ್ತೂರು ಅವರ ನಿರ್ದೇಶನದಲ್ಲಿ ನೃತ್ಯ ನಿರತ ಪುತ್ತೂರು ಪ್ರಸ್ತುತ ಪಡಿಸುವ “ಭರತನಾಟ್ಯ ಕಾರ್ಯಕ್ರಮ” ನಡೆಯಲಿದೆ.
ಸಂಜೆ 4.30ರಿಂದ ನಡೆಯುವ ಸುದರ್ಮ ಸಭೆಯಲ್ಲಿ ಶ್ರೀ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ಪಂಜಿಗುಡ್ಡೆ ಈಶ್ವರ ಭಟ್ ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಯಜಮಾನ ಶ್ರೀ ಕರಿಯಣ್ಣ ಪಕಳ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಮತ್ತು ಇನ್ನಿತರ ಗಣ್ಯರು ಈ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 7 ಗಂಟೆಯಿಂದ ಡಾ. ವಿನಯಾ ಪದ್ಯಾಣ ಮತ್ತು ಬಳಗ, ಬೆಂಗಳೂರು ಇವರಿಂದ ಭಕ್ತಿಗಾನ ಸುಧಾ ಕಾರ್ಯಕ್ರಮ ನಡೆಯಲಿದೆ.
ಏಪ್ರಿಲ್ 2 ಗುರುವಾರ ಬೆಳಿಗ್ಗೆ 7 ಗಂಟೆಯಿಂದ ಬೆಳಗ್ಗಿನ ಪೂಜೆ, ಗಣಪತಿ ಹೋಮ, ಅಂಕುರಪೂಜೆ, ಮಧ್ಯಾಹ್ನ ಪೂಜೆ, ಸಂಹಾರ ತತ್ವಹೋಮ, ಸಂಹಾರ ತತ್ವ ಕಲಶ, ಶಯ್ಯಾ ಮಂಟಪದಲ್ಲಿ ಕುಂಭೇಶ ಕರ್ಕರಿ ಕಲಶ ಪೂಜೆ, ವಿದ್ಯೇಶ್ವರ ಕಲಶ ಪೂರಣೆ ಹಾಗೂ ನಿದ್ರಾ ಕಲಶ ಪೂರಣೆ, ಅಗ್ನಿ ಜನನ, ಬಿಂಬ ಶುದ್ದಿ ಕಲಶ ಪೂರಣೆ, ಶ್ರೀ ದೇವರಿಗೆ ಸಂಹಾರ ತತ್ವಕಲಶಾಭಿಷೇಕ, ಜೀವಕಲಶ ಪೂರಣೆ, ಜೀವೋದ್ವಾಸನ ಕ್ರಿಯೆಗಳು ನಡೆಯಲಿವೆ.
ಸಂಜೆ 5 ಗಂಟೆಯಿಂದ ಅಂಕುರಪೂಜೆ, ಸೃಷ್ಟಿ ಪುಣ್ಯಾಹವಾಚನ, ವಾಸ್ತು ಪೂಜೆ, ಬಿಂಬ ಶುದ್ದಿ ಕಲಶಾಭಿಷೇಕ, ಶಿರಸ್ತತ್ವ ಹೋಮ, ಶಾಂತಿ ಹೋಮ, ಧ್ಯಾನಾಧಿವಾಸ ಕ್ರಿಯೆ, ಭದ್ರಕ ಮಂಡಲ ಪೂಜೆ, ಅಧಿವಾಸ ಹೋಮ, ಶಯ್ಯೆಯಲ್ಲಿ ರಾತ್ರಿ ಪೂಜೆ, ಅಧಿವಾಸ ಬಲಿ, ಶಕ್ತಿಪೂಜೆ, ರತ್ನನ್ಯಾಸ, ಪೀಠಾಧಿವಾಸ ಹಾಗೂ ಪ್ರಾಸಾದ ಅಧಿವಾಸ ಕಾರ್ಯಕ್ರಮಗಳು ಜರುಗಲಿವೆ.
ಇದರೊಂದಿಗೆ ಬೆಳಿಗ್ಗೆ 8.30ರಿಂದ 10.30ರವರೆಗೆ ಶ್ರೀ ಜ್ಯೇಷ್ಠರಾಜ ಭಜನಾ ಮಂಡಳಿ, ಚಿಪ್ಪಾರು ಹಾಗೂ ಶ್ರೀ ಸತ್ಯಸಾಯಿ ಸೇವಾ ಸಮಿತಿ, ಬಾಯಾರು ಇವರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 9.30ರಿಂದ ರಂಜನ್ ವಗೆನಾಡು ಮತ್ತು ಬಳಗದವರಿಂದ ಭಕ್ತಿ ಸಂಗೀತ, ಬೆಳಿಗ್ಗೆ 11.30ರಿಂದ ಶ್ರೀ ಮಛ್ಛೇಂದ್ರನಾಥ ಕನ್ಯಾನ ಮತ್ತು ಸಂಗಡಿಗರಿಂದ “ಸ್ಯಾಕ್ಸೋಫೋನ್ ಕಛೇರಿ” ನಡೆಯಲಿದೆ.
ಮಧ್ಯಾಹ್ನ 1.30ರಿಂದ ಭಾಗವತ ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳ ನೇತೃತ್ವದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ ‘ಸಂಜಯ ರಾಯಭಾರ’ ನಡೆಯಲಿದೆ.
ಸಂಜೆ 4.30ರಿಂದ ಸುಧರ್ಮ ಸಭೆ ನಡೆಯಲಿದ್ದು, ಶ್ರೀ ಭೀಮನಕಟ್ಟೆ ಮಠದ ಪರಮಪೂಜ್ಯ ಶ್ರೀ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು, ಇವರಿಂದ ಆಶೀರ್ವಚನ ನೀಡಲಾಗುತ್ತದೆ. ಹಿರಿಯ ವೈದಿಕ ವಿದ್ವಾಂಸರಾದ ವೇದಮೂರ್ತಿ ಶ್ರೀ ಬೋಳಂತಕೋಡಿ ರಾಮಭಟ್ ಅವರು ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಹರೀಶ್ ಇಂಜಾಡಿ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಮತ್ತು ಇನ್ನಿತರ ಗಣ್ಯರು ಈ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 7 ಗಂಟೆಯಿಂದ ಕುಮಾರಿ ಸೂರ್ಯಗಾಯತ್ರಿ ಇವರಿಂದ ಭಕ್ತಿಗಾನ ಸಂಭ್ರಮ ನಡೆಯಲಿದೆ.
ಏಪ್ರಿಲ್ 3 ಶುಕ್ರವಾರದಂದು ಬೆಳಿಗ್ಗೆ 7 ಗಂಟೆಯಿಂದ ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಅಂಕುರಪೂಜೆ, ಶಯ್ಯಾಪೂಜೆ ನಡೆಯಲಿದ್ದು, ಬೆಳಿಗ್ಗೆ 10.56 ರಿಂದ ಒದಗುವ ಮಿಥುನ ಲಗ್ನದ ಸುಮುಹೂರ್ತದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರು, ಶ್ರೀ ಮಹಾಗಣಪತಿ ಹಾಗೂ ಶ್ರೀ ಶಾಸ್ತಾರ ದೇವರ ಪುನರ್ ಪ್ರತಿಷ್ಠೆ, ಅಷ್ಟಬಂಧ ಪ್ರತಿಷ್ಠೆ, ಜೀವಕಲಾಭಿಷೇಕ ಸೇರಿದಂತೆ ಅಷ್ಟಮಂಗಲ ದರ್ಶನ, ಗೋದರ್ಶನ, ನಿದ್ರಾಕಲಾಭಿಷೇಕ, ಕುಂಭೇಶ ಕಲಾಶಾಭಿಷೇಕ, ಆವಾಹನಾದಿಗಳು, ಶಿಖರ ಪ್ರತಿಷ್ಠೆ, ಪ್ರತಿಷ್ಠಾ ಬಲಿ, ಪ್ರಸನ್ನ ಪೂಜೆ, ರುದ್ರಹೋಮ, ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ಮಹಾಮಂಗಳಾರತಿ ಹಾಗೂ ಸಂತರ್ಪಣೆ ನಡೆಯಲಿದೆ.
ಸಂಜೆ 5 ಗಂಟೆಯಿಂದ ಕ್ಷೇತ್ರಾನುಷ್ಠಾನ ಪದ್ಧತಿ ನಿರ್ಣಯ, ಭದ್ರ ದೀಪ ಪ್ರತಿಷ್ಠೆ, ಪ್ರಾರ್ಥನೆ, ಕವಾಟಬಂಧನ, ಗರ್ಭದ್ವಾರದಲ್ಲಿ ಸೋಪಾನಪೂಜೆ, ಅಂಕುರಪೂಜೆ ಹಾಗೂ ಶ್ರೀ ದುರ್ಗಾಪೂಜೆ ನಡೆಯಲಿವೆ.
ಬೆಳಿಗ್ಗೆ 8.30ರಿಂದ 10.30ರ ವರೆಗೆನಡೆಯುವ ಭಜನಾ ಕಾರ್ಯಕ್ರಮದಲ್ಲಿ ಚಿಪ್ಪಾರು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಹಾಗೂ ಬಾಯಾರು ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಭಾಗವಹಿಸಲಿವೆ.
ಬೆಳಿಗ್ಗೆ 9.30ರಿಂದ ಡಾ. ಮಹೇಶ ಪದ್ಯಾಣ ಮತ್ತು ತಂಡದಿಂದ ಗಾಯನ, ನವಾವರಣ ಕೃತಿಗಳು ಮತ್ತು ಭಕ್ತಿಗೀತೆಗಳು “ಸಂಗೀತವಾಹಿನಿ” ಎಂಬ ಗಾಯನ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 1.30ರಿಂದ ಎ.ಕೆ. ಉಮಾನಾಥ ದೇವಾಡಿಗ ಅಶ್ವತ್ಥಪುರ ಹಾಗೂ ಬಳಗದಿಂದ “ನಾದಸ್ವರ ಕಚೇರಿ”, ಮಧ್ಯಾಹ್ನ 2.30ರಿಂದ ಶ್ರೀಮತಿ ಮಧುಮಿತ ಪಡುಮಲೆ ಮತ್ತು ಕುಮಾರಿ ತನ್ಮಯಿ ಉಪ್ಪಂಗಳ ಇವರಿಂದ “ವೀಣೆ-ವಯೋಲಿನ್ ಕಚೇರಿ” ನಡೆಯಲಿದೆ.
ಸಂಜೆ 4.30ರಿಂದ ಸುಧರ್ಮ ಸಭೆ ನಡೆಯಲಿದ್ದು, ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಮದ್ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹಾಗೂ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಹೊರನಾಡು ಕ್ಷೇತ್ರದ ಧರ್ಮಕರ್ತರಾದ ಡಾ. ಜಿ. ಭೀಮೇಶ್ವರ ಜೋಷಿ ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಡಾ. ಟಿ. ಶ್ಯಾಮ್ ಭಟ್ (ಐಎಎಸ್ ನಿವೃತ್ತ) ಅಧ್ಯಕ್ಷತೆ ವಹಿಸಲಿದ್ದಾರೆ ಮತ್ತು ಇನ್ನಿತರ ಗಣ್ಯರು ಈ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ರಾತ್ರಿ 7 ಗಂಟೆಯಿಂದ ನಾಗವ್ರಜ ಕ್ಷೇತ್ರ, ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ “ತ್ರಿಪುರ ಮಥನ” ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.
ಏಪ್ರಿಲ್ 4, ಶನಿವಾರದ ದಿನ ವಿವಿಧ ವೈದಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ಜರುಗಲಿವೆ. ಬೆಳಿಗ್ಗೆ 7 ಗಂಟೆಯಿಂದ ಸೋಪಾನಪೂಜೆ, ಗಣಪತಿ ಹೋಮ, ಅಂಕುರಪೂಜೆ, ಪರಿವಾರ ಪ್ರತಿಷ್ಠೆಗಳು ಹಾಗೂ ಗೀತಾಜ್ಞಾನ ಯಜ್ಞ ಇವರಿಂದ ಶ್ರೀಮದ್ಭಗವದ್ಗೀತಾ ಪಾರಾಯಣ ನಡೆಯಲಿದೆ.
ಸಂಜೆ 5 ಗಂಟೆಯಿಂದ ಅಂಕುರಪೂಜೆ, ಸೋಪಾನಪೂಜೆ, ಪರಿವಾರ ದೇವರಿಗೆ ಕಲಶ ಪೂರಣೆ, ಅಧಿವಾಸ ಹೋಮ, ಬ್ರಹ್ಮಕಲಶ ಮಂಟಪ ಸಂಸ್ಕಾರ ಹಾಗೂ ಬ್ರಹ್ಮಕಲಶ ಮಂಡಲ ರಚನೆ ನಡೆಯಲಿದೆ.
ಬೆಳಿಗ್ಗೆ 8.30ರಿಂದ 10.30ರವರೆಗೆ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ, ಬೇಡಗುಡ್ಡೆ ಹಾಗೂ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ, ವಗೆನಾಡು ಇವರಿಂದ ಭಜನಾ ಕಾರ್ಯಕ್ರಮ ಜರುಗಲಿದೆ.
ಬೆಳಿಗ್ಗೆ 9.30ರಿಂದ ಶ್ರೀಮತಿ ವಿದ್ಯಾ ಜಯರಾಮ್ ಕಜೆ ಮತ್ತು ಬಳಗದವರಿಂದ “ಭಕ್ತಿ ಸಂಗೀತ” ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1.30ರಿಂದ ಪ್ರಸಾದ್ ಬಾಯಾರು ಮತ್ತು ಬಳಗದವರಿಂದ “ಹರಿನಾಮ ಸಂಕೀರ್ತನೆ” ನಡೆಯಲಿದ್ದು, 2.30ರಿಂದ ನೃತ್ಯಗುರು ಶ್ರೀ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯೆ ಕು. ಆದ್ಯಗೌರಿ ಅಡ್ಕತ್ತಿಮಾರು ಮತ್ತು ಬಳಗದವರಿಂದ “ನೃತ್ಯಾಮೃತಂ” ಕಾರ್ಯಕ್ರಮ ನಡೆಯಲಿದೆ.
ಸಂಜೆ 4.30ರಿಂದ ಸುಧರ್ಮ ಸಭೆ ಜರುಗಲಿದ್ದು, ಪರಮಪೂಜ್ಯ ಶ್ರೀ ಶ್ರೀ ಜಿತಕಾಮಾನಂದಜೀ ಮಹಾರಾಜ್ ಅಧ್ಯಕ್ಷರು, ಶ್ರೀ ರಾಮಕೃಷ್ಣ ಮಠ, ಮಂಗಳೂರು ಆಶೀರ್ವಚನ ನೀಡಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಅರ್ಚಕರು ವೇದಮೂರ್ತಿ ಶ್ರೀ ಹರಿನಾರಾಯಣದಾಸ ಅಸ್ರಣ್ಣರು ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಉದ್ಯಮಿ ಶಶಿಧರ ಶೆಟ್ಟಿ ಬರೋಡ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸಂಜೆ 7 ಗಂಟೆಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಮೂಡಬಿದಿರೆ ಇವರಿಂದ “ಆಳ್ವಾಸ್ ಸಾಂಸ್ಕೃತಿಕ ವೈಭವ” ಕಾರ್ಯಕ್ರಮ ನಡೆಯಲಿದೆ.
ಏಪ್ರಿಲ್ 5, ಆದಿತ್ಯವಾರದಂದು ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 7 ಗಂಟೆಯಿಂದ ಗಣಪತಿ ಹೋಮ, ಅಂಕುರಪೂಜೆ, ಶ್ರೀ ಮಹಾಗಣಪತಿ, ಶ್ರೀ ಚಕ್ರ, ಶ್ರೀ ಶಾಸ್ತಾರ, ಶ್ರೀ ನಾಗ ದೇವರು, ಶ್ರೀ ಧೂಮಾವತಿ ಹಾಗೂ ಕೊರತಿ ದೈವಗಳಿಗೆ ಕಲಶಾಭಿಷೇಕ, ಶಾಂತಿ ಪ್ರಾಯಶ್ಚಿತ್ತ ಹೋಮಾದಿಗಳು, ತತ್ವ ಹೋಮ, ತತ್ವಕಲಶ ಪೂಜೆ, ಕುಂಭೇಶ ಕಲಶ ಪೂಜೆ, ಕರ್ಕರಿ ಕಲಶ ಪೂಜೆ, ಅಗ್ನಿಜನನ, ಸೋಪಾನ ಪೂಜೆ ಹಾಗೂ ಶ್ರೀ ಶಿವಪಂಚಾಕ್ಷರಿ ಮತ್ತು ಶ್ರೀ ಶಕ್ತಿ ಪಂಚಾಕ್ಷರಿ ಹವನ ನಡೆಯಲಿದೆ.
ಸಂಜೆ 5 ಗಂಟೆಯಿಂದ ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮ ಕುಂಭ ಪೂರಣೆ, ದ್ರವ್ಯಕಲಶ ಪೂರಣೆ, ಪರಿಕಲಶ ಪೂರಣೆ, ಅಧಿವಾಸ ಹೋಮ, ಬ್ರಹ್ಮಕಲಶ ಪೂಜೆ, ಅಧಿವಾಸ ಬಲಿ, ಕಲಶಾಧಿವಾಸ, ಮಹಾಬಲಿ ಪೀಠಾಧಿವಾಸ ಮತ್ತು ಸೋಪಾನ ಪೂಜೆಗಳು ನೆರವೇರಲಿವೆ.
ಬೆಳಿಗ್ಗೆ 8.30ರಿಂದ 10.30ರವರೆಗೆ ಶ್ರೀ ಗುರುದೇವ ಭಜನಾ ಮಂಡಳಿ, ಒಡಿಯೂರು ಮತ್ತು ಶ್ರೀ ಭಾರತಿ ಸೇವಾ ಸಮಿತಿ, ಕುಡ್ಪಲ್ತಡ್ಕ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 9.30ರಿಂದ “ಪದ್ಯಾಣ ವೈಭವ” ಕಾರ್ಯಕ್ರಮ ಜರುಗಲಿದೆ.
ಮಧ್ಯಾಹ್ನ 1.30ರಿಂದ ಅರವಿಂದ ರಮೇಶ್ ಕೊಮ್ಮೆ ಅವರಿಂದ “ಕೊಳಲು ಮತ್ತು ಪಿಟೀಲು ಕಛೇರಿ” ನಡೆಯಲಿದ್ದು, ಮೃದಂಗದಲ್ಲಿ ಕು. ಶ್ರಾವ್ಯ ತಲಕಳ ಸಹಕರಿಸಲಿದ್ದಾರೆ.
ಮಧ್ಯಾಹ್ನ 2.30ರಿಂದ ವಿದುಷಿ ಶ್ರೀಮತಿ ಸ್ಮಿತಾ ಶ್ರೀಪತಿ ಹಾಗೂ ಅವರ ತಂಡ ಅರ್ಥ ನೃತ್ಯ ಕಲಾಮಂದಿರ- ಬೆಂಗಳೂರು ಇದರ ವಿದ್ಯಾರ್ಥಿನಿಯರಿಂದ ಭರತನಾಟ್ಯ ಕಾರ್ಯಕ್ರಮ ಮತ್ತು “ನವದುರ್ಗಾ ವೈಭವಂ” ನೃತ್ಯ ರೂಪಕ ಪ್ರದರ್ಶನ ನಡೆಯಲಿದೆ.
ಸಂಜೆ 4.30ರಿಂದ ಸುಧರ್ಮ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಹಾಗೂ ಗುರುಪುರದ ಶ್ರೀ ವಜ್ರದೇಹಿ ಮಠದ ಪರಮಪೂಜ್ಯ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಹಟ್ಟಿಯಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಬಾಲಚಂದ್ರ ಭಟ್ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ನೇಪಾಳದ ಕಾಠ್ಮಂಡುವಿನ ಶ್ರೀ ಪಶುಪತಿನಾಥ ದೇವಸ್ಥಾನದ ವಿಶ್ರಾಂತ ಪ್ರಧಾನ ಅರ್ಚಕರಾದ ಶ್ರೀ ರಘುರಾಮ ಕಾರಂತ ವಹಿಸಲಿದ್ದಾರೆ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಜೆ 7 ಗಂಟೆಯಿಂದ ಶ್ರೀಮತಿ ಶಿವಶ್ರೀ ಸ್ಕಂದ ಪ್ರಸಾದ್, ಬೆಂಗಳೂರು ಇವರಿಂದ “ಶಿವಪದ ಯಾನ” ಕಾರ್ಯಕ್ರಮ ನಡೆಯಲಿದೆ.
ಏಪ್ರಿಲ್ 6 ಸೋಮವಾರ ಬೆಳಿಗ್ಗೆ 7 ಗಂಟೆಯಿಂದ ಗಣಪತಿ ಹೋಮ, ಅಧಿವಾಸ ಮಂಟಪದಲ್ಲಿ ಬೆಳಗ್ಗಿನ ಪೂಜೆ, ಕವಾಟೋದ್ಘಾಟನೆ, ಶ್ರೀ ಮಹಾಲಿಂಗೇಶ್ವರ ದೇವರಿಗೆ ಪಂಚಾಮೃತಾಭಿಷೇಕ ಸೇರಿದಂತೆ ವಿವಿಧ ಕಲಶಾಭಿಷೇಕಗಳು ನಡೆಯಲಿವೆ. ಶತರುದ್ರ ಸಹಿತ ಬ್ರಹ್ಮ ಕುಂಭಾಭಿಷೇಕ, ಮಂತ್ರ ನ್ಯಾಸಾದಿಗಳು, ಮಹಾಬಲಿ ಪೀಠ ಪ್ರತಿಷ್ಠೆ, ಮಹಾಮಂಗಳಾರತಿ, ವೈದಿಕ ಮಂತ್ರಾಕ್ಷತೆ ಹಾಗೂ ಸಂತರ್ಪಣೆ ಕಾರ್ಯಕ್ರಮಗಳು ನೆರವೇರಲಿವೆ.
ಸಂಜೆ 5 ಗಂಟೆಯಿಂದ ದೀಪಾರಾಧನೆ, ರಾತ್ರಿ ಪೂಜೆ, ದೊಡ್ಡ ರಂಗ ಪೂಜೆ, ಉತ್ಸವ ಬಲಿ ಹಾಗೂ ಕಟ್ಟೆಪೂಜೆ ನಡೆಯಲಿವೆ.
ಬೆಳಿಗ್ಗೆ 8.30ರಿಂದ 10.30ರವರೆಗೆ ಶ್ರೀ ಜಲದುರ್ಗಾಪರಮೇಶ್ವರೀ ಭಜನಾ ಮಂಡಳಿ ಪಡ್ಪು, ಆನೆಕಲ್ಲು ಹಾಗೂ ಶ್ರೀ ಅಯ್ಯಪ್ಪ ಭಜನಾ ಮಂಡಳಿ ಗುಂಡಮಜಲು ಇವರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 9.30ರಿಂದ ಶ್ರೀ ಗಣಪತಿ ಪದ್ಯಾಣ ಮತ್ತು ಬಳಗದವರಿಂದ “ಶಿವಾನುಗ್ರಹ” ಕಾವ್ಯವಾಚನ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 2.30ರಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ “ಸಂಗೀತ ಗಾನಸಂಭ್ರಮ” ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಜೆ 4.30ರಿಂದ ಸುಧರ್ಮ ಸಭೆ ನಡೆಯಲಿದ್ದು, ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವದತ್ತ ಸಂಸ್ಥಾನಂ, ಒಡಿಯೂರು ಹಾಗೂ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆವೂರು ಆಶೀರ್ವಚನ ನೀಡಲಿದ್ದಾರೆ. ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಮಂಗಳೂರು ಶಿಲೆಶಿಲೆ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಸಭೆಗೆ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.), ಪುತ್ತೂರು ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ ಮತ್ತು ಇನ್ನಿತರ ಗಣ್ಯರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಗಂಟೆ 7 ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ “ಶ್ರೀ ದೇವಿ ಮಹಾತ್ಮೆ” ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.
ಏಪ್ರಿಲ್ 7 ಮಂಗಳವಾರದಂದು ಬೆಳಿಗ್ಗೆ 7 ಗಂಟೆಯಿಂದ ದೀಪ ಬಲಿ, ಶ್ರೀ ಭೂತ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಬೆಳಗಿನ ಪೂಜೆ, ಸಂಪ್ರೋಕ್ಷಣೆ, ಮಧ್ಯಾಹ್ನ ಪೂಜೆ, ಮಹಾಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆಯಂತಹ ವೈದಿಕ ಕಾರ್ಯಕ್ರಮಗಳು ನಡೆಯಲಿವೆ.
ರಾತ್ರಿ 7 ಗಂಟೆಯಿಂದ ಶ್ರೀ ಧೂಮಾವತಿ ಹಾಗೂ ಕೊರತಿ ದೈವಗಳ ನೇಮ, ಬಟ್ಟಲು ಕಾಣಿಕೆ ಹಾಗೂ ಗಂಧ ಪ್ರಸಾದ ವಿತರಣೆಯ ಕಾರ್ಯಕ್ರಮ ಜರುಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ಶ್ರೀ ಲಲಿತ ಕಲಾವಿದರು (ರಿ.) ತಂಡವು “ಶ್ರೀ ಶನೀಶ್ವರ ಮಹಾತ್ಮೆ” ಪೌರಾಣಿಕ ನಾಟಕವನ್ನು ಪ್ರದರ್ಶಿಸಲಿದ್ದು, ಪಟ್ಲ ಭಾಗವತರ ದೀಪಕ್ ಮಾಲ ಹಾಡಿನೊಂದಿಗೆ ನಡೆಯಲಿದೆ.
ಈ ಎಲ್ಲಾ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪದ್ಯಾಣದ ಬ್ರಹ್ಮಕಲಶಾಭಿಷೇಕವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.








