Tuesday, April 23, 2024
spot_imgspot_img
spot_imgspot_img

ಭಾರತದ ಮುಂದೆ ಮಂಡಿಯೂರಿದ ಪಾಕಿಸ್ತಾನ.

- Advertisement -G L Acharya panikkar
- Advertisement -

ನವದೆಹಲಿ : ಭಾರತೀಯ ಸೇನೆ ಈ ಹಿಂದೆ ಪಾಕಿಸ್ತಾನದ ಮೇಲೆ ನಡೆಸಿದ್ದ ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ ಸುಮಾರು 300 ಉಗ್ರರು ಹತರಾಗಿರುವುದು ನಿಜ ಎಂದು ಪಾಕ್ ಕೊನೆಗೂ ಸತ್ಯ ಒಪ್ಪಿಕೊಂಡಿದೆ.
ಈ ಬಗ್ಗೆ ಪಾಕ್ ನ ಮಾಜಿ ರಾಯಭಾರಿ ಅಘಾ ಹಿಲಾಲಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು 2019 ರ ಫೆಬ್ರವರಿ 26 ರಂದು ನಡೆದ ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ 300 ಉಗ್ರರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ.

ಜೈಷ್ ಎ ಮೊಹಮ್ಮದ್ ಸಂಘಟನೆಯ ಉಗ್ರರು ಹಾಕಿದ್ದ ಕ್ಯಾಂಪ್ ಮೇಲೆ ಭಾರತೀಯ ಸೇನೆ ಏರ್ ಸ್ಟ್ರೈಕ್ ನಡೆಸಿತ್ತು. ಈ ಸಂದರ್ಭದಲ್ಲಿ ದಾಳಿ ವೇಳೆ ಪಾಕ್ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಿಕೆ ನೀಡಿತ್ತು. ಪುಲ್ವಾಮಾದಲ್ಲಿ 40 ಸೈನಿಕರ ಮೇಲೆ ಉಗ್ರರು ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಈ ದಾಳಿ ನಡೆಸಿತ್ತು.

ಇದೀಗ ಭಾರತೀಯ ಸೇನೆ ಈ ಹಿಂದೆ ಪಾಕಿಸ್ತಾನದ ಮೇಲೆ ನಡೆಸಿದ್ದ ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ ಸುಮಾರು 300 ಉಗ್ರರು ಹತರಾಗಿರುವುದು ನಿಜ ಎಂದು ಪಾಕ್ ಕೊನೆಗೂ ಸತ್ಯ ಒಪ್ಪಿಕೊಂಡಿದೆ.

- Advertisement -

Related news

error: Content is protected !!