Saturday, July 25, 2026
spot_imgspot_img
spot_imgspot_img

ವಿಟ್ಲ: ತಾಲೂಕು ಪಂಚಾಯತ್ ಸದಸ್ಯ, ಕಾಂಗ್ರೆಸ್ ಮುಖಂಡ ಕುಮಾರ್ ಭಟ್ ಬದಿಕೋಡಿ ರಾಜಿನಾಮೆ !

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ, ಕಾಂಗ್ರೆಸ್ ಮುಖಂಡ ಕುಮಾರ್ ಭಟ್ ಬದಿಕೋಡಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.

ವಿಟ್ಲದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಕುಮಾರ್ ಭಟ್ ಅವರು ಕ್ಷೇತ್ರದ ಅಭಿವೃದ್ಧಿಗೆ ಕೆಲವು ವ್ಯಕ್ತಿಗಳಿಂದ ಬಹಳಷ್ಟು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು.

ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರದ ವ್ಯಕ್ತಿಗಳು ಸೇರಿಕೊಂಡು ಕನ್ಯಾನ ಗ್ರಾಮ ಪಂಚಾಯಿತಿಗೆ ತಾಲೂಕು ಪಂಚಾಯಿತಿ ಸದಸ್ಯ ಆಗಮಿಸಬಾರದು ಎಂಬ ನಿರ್ಣಯವನ್ನು ಕೈಗೊಂಡಿದ್ದರು. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟಾಗಬಾರದು ಎಂದು ಯಾವುದೇ ತಡೆಯಾಜ್ಞೆ ತಂದಿರಲಿಲ್ಲ ಎಂದು ತಿಳಿಸಿದರು.

ಬಿಳಿ ಅಂಗಿ ಪ್ಯಾಂಟ್ ಧರಿಸಿರುವ ವ್ಯಕ್ತಿ ಪಕ್ಷದ ನಾಯಕರನ್ನು ಹೊಗಳಿ ರಾಜಕೀಯದ ಸದ್ಯ ಸ್ಥಿತಿಗೆ ಆಗಮಿಸಿದ್ದಾರೆ. ಕಾರ್ಯಕರ್ತರು ಯಾವುದೇ ಕಾರಣಕ್ಕೆ ರಾಜೀನಾಮೆ ಕೊಡಬಾರದು ಎಂಬ ಬೇಡಿಕೆ ಇಟ್ಟಿದ್ದರು. ಆದರೆ ಅಲ್ಲಾದ ಅವಮಾನ ಕಷ್ಟಗಳನ್ನು ಗಮನಿಸಿ ರಾಜೀನಾಮೆ ಸಲ್ಲಿಸಿ, ಯಾರ ಬೆಂಬಲವಿಲ್ಲದೆ ಕನ್ಯಾನ ಗ್ರಾಮ ಪಂಚಾಯಿತಿಗೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದೇನೆ. ಕಾಂಗ್ರೆಸ್ ನ ಮೂಲ ಸಂಸ್ಕೃತಿ ನಾಶವಾಗಿದೆ. ಬಿಜೆಪಿಗೆ ಸೇರ್ಪಡೆಯ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದರು.

- Advertisement -

Related news

error: Content is protected !!