Friday, April 26, 2024
spot_imgspot_img
spot_imgspot_img

ಪರೀಕ್ಷಾ ಪೇ ಚರ್ಚಾ ಮೂಲಕ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕಿವಿಮಾತು

- Advertisement -G L Acharya panikkar
- Advertisement -

ನವದೆಹಲಿ: ಪರೀಕ್ಷಾ ಪೇ ಚರ್ಚಾ ಮೂಲಕ ಪ್ರಧಾನಿ ನರೇಂದ್ರ ಮೋದಿ ಮುಂದಿನ ದಿನಗಳಲ್ಲಿ ಪರೀಕ್ಷೆಯನ್ನು ಎದುರಿಸಲಿರುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಅಲ್ಲದೇ ತಮ್ಮ ಖಾಲಿ ಸಮಯವನ್ನ ಹೊಸದನ್ನ ಸೃಷ್ಟಿಸುವ ವಿಚಾರಗಳಿಗಾಗಿ ವಿನಿಯೋಗಿಸಿ ಎಂದು ಸಲಹೆಯನ್ನೂ ನೀಡಿದರು.

ಖಾಲಿ ಸಮಯ ಖಜಾನೆಯಂತೆ ಅದು ಸವಲತ್ತು ಮತ್ತು ಅವಕಾಶಗಳನ್ನ ನೀಡುತ್ತದೆ. ನಾವು ನಮ್ಮ ಖಾಲಿ ಸಮಯವನ್ನು ಹೊಸ ಅನ್ವೇಷಣೆಗಳಿಗೆ ಮುಡಿಪಾಗಿಡಬೇಕು, ಹೊಸ ವಿಚಾರಗಳನ್ನು ಅರಿಯಲು ವ್ಯಯಿಸಬೇಕು. ಮಕ್ಕಳು ತುಂಬಾ ಸ್ಮಾರ್ಟ್ ನೀವು ಹೇಳಿದಂತೆಯೇ ಅವರು ಮಾಡುತ್ತಾರೆ ಎಂದು ಹೇಳುವುದು ಕಷ್ಟ, ಆದರೆ ಅವರು ತಮ್ಮ ಪೋಷಕರಿಂದ ಮತ್ತು ಶಿಕ್ಷಕರಿಂದ ಸಾಕಷ್ಟು ಕಲಿಯುತ್ತಾರೆ.

ಪೋಷಕರು ತಾವು ಆಹಾರ ತಯಾರಿಸಲು ತೆಗೆದುಕೊಂಡ ಸಮಯ ಮತ್ತು ಆಹಾರ ತಯಾರಿಸಲು ಬಳಸಿದ ಪದಾರ್ಥಗಳ ಬಗ್ಗೆ ತಿಳಿಸಿ. ಆರೋಗ್ಯಕರ ಆಹಾರದ ಬಗ್ಗೆ ತಿಳಿಸಲು ಅನೇಕ ವೆಬ್​ಸೈಟ್​ಗಳು ಲಭ್ಯ. ಫ್ಯಾಮಿಲಿ ಡಾಕ್ಟರ್​ಗಳೂ ಸಹ ಯಾವ ಪದಾರ್ಥ ನಮಗೆ ಉತ್ತಮ ಎಂಬುದನ್ನು ತಿಳಿಸುತ್ತಾರೆ. ಈ ಕುರಿತು ಶಿಕ್ಷಕರೂ ಅರಿವು ಮೂಡಿಸಬಹುದು. ಇದು ನನ್ನ ಸಿಲೇಬಸ್​ಗೆ ಹೊರತಾದ ವಿಷಯ. ಆದರೆ ನನ್ನ ಕೆಲವು ಸಲಹೆಗಳು ಉಪಯೋಗಕಾರಿಯಾಗಬಹುದು.

ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಶಾಂತಚಿತ್ತರಾಗಿರಬೇಕು. ತಮ್ಮ ಒತ್ತಡವನ್ನ ಎಕ್ಸಾಂ ಹಾಲ್​ನ ಹೊರಗೇ ಬಿಟ್ಟುಬಿಡಬೇಕು. ಈ ಮೂಲಕ ವಿದ್ಯಾರ್ಥಿಗಳು ಉತ್ತಮವಾಗಿ ಪರೀಕ್ಷೆಗಳನ್ನು ಎದುರಿಸಬಹುದು.

ನಾವು ಕೊರೊನಾ ಸಮಯದಲ್ಲಿ ಕಳೆದುಕೊಂಡವುಗಳ ಮಹತ್ವ ನಮಗೆ ಈಗ ಅರ್ಥವಾಗಿದೆ. ಕೊರೊನಾ ಮುಗಿದ ನಂತರವೂ ನಾವು ಅವುಗಳ ಮಹತ್ವವನ್ನು ಮರೆಯಬಾರದು. ಈ ಸಮಯ ಕುಟುಂಬಗಳನ್ನು ಮತ್ತಷ್ಟು ಹತ್ತಿರವಾಗಿಸಿ ಸದೃಢಗೊಳಿಸಿದೆ.

driving
- Advertisement -

Related news

error: Content is protected !!