Thursday, April 25, 2024
spot_imgspot_img
spot_imgspot_img

ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ!

- Advertisement -G L Acharya panikkar
- Advertisement -

ಪಟ್ನಾ: ಏಳೇಳು ಜನ್ಮ ಜತೆಯಾಗಿ ಬದುಕುವ ಪ್ರಮಾಣ ಮಾಡಿ ಮದುವೆಯಾಗಿದ್ದ ಗಂಡ ಹೆಂಡತಿಯನ್ನು ಕೊಲೆ ಮಾಡಿ ತಾನೂ ಬಿಲ್ಡಿಂಗ್​ನಿಂದ ಹಾರಿ ಪ್ರಾಣ ಬಿಟ್ಟಿರುವ ಘಟನೆ ಬಿಹಾರದ ಪಟ್ನಾದಲ್ಲಿ ನಡೆದಿದೆ. ಈ ಕೃತ್ಯಕ್ಕೆ ಕಾರಣ ಆತನ ಹೆಂಡತಿ ಕರೊನಾ ಸೋಂಕಿಗೆ ತುತ್ತಾಗಿದ್ದು ಎನ್ನಲಾಗಿದೆ.

driving

ಅತುಲ್​ ಲಾಲ್​ ಹೆಸರಿನ ವ್ಯಕ್ತಿ ಪಟ್ನಾದ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಆತನ ಪತ್ನಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಅದಾದ ಮೇಲೆ ದಂಪತಿ ನಡುವೆ ಜಗಳ ಆರಂಭವಾಗಿದೆ. ಅದೇ ಸಿಟ್ಟಿನಿಂದ ಕೋವಿಡ್​ ಪಾಸಿಟಿವ್ ಹೆಂಡತಿಯ ಕುತ್ತಿಗೆಯನ್ನು ಅತುಲ್​ ಲಾಲ್​ ಬ್ಲೇಡ್​ನಿಂದ ಕತ್ತರಿಸಿದ್ದಾನೆ. ನಂತರ ಅಪಾರ್ಟ್​ಮೆಂಟ್​ನ ನಾಲ್ಕನೇ ಮಹಡಿಗೆ ತೆರಳಿ ಅಲ್ಲಿಂದ ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದಾನೆ.

ಅಘಾತಕಾರಿ ವಿಚಾರ ಏನೆಂದರೆ ಈ ದಂಪತಿಗೆ ಮಕ್ಕಳಿದ್ದು, ಅವರ ಎದುರೇ ಈ ಕೃತ್ಯ ನಡೆದಿದೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

- Advertisement -

Related news

error: Content is protected !!