Friday, April 26, 2024
spot_imgspot_img
spot_imgspot_img

ಗರ್ಭಿಣಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ರೈಲ್ವೆ ಹಳಿ ಮೇಲೆ ಬಿಸಾಡಿದ ಕಾಮುಕರು!

- Advertisement -G L Acharya panikkar
- Advertisement -

ಬಿಹಾರ: ಗರ್ಭಿಣಿಯೊಬ್ಬಳ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಈ ಆಘಾತ ಮತ್ತು ನೋವಿನಿಂದ ಪ್ರಜ್ಞಾಹೀನಳಾದ ಆಕೆಯನ್ನು ರೈಲ್ವೆ ಹಳಿಯ ಮೇಲೆ ಬಿಸಾಡಿರುವ ಹೀನ ಕೃತ್ಯ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಶನಿವಾರ ರಾತ್ರಿ ಪಾಟ್ನಾದ 24 ವರ್ಷದ ಗರ್ಭಿಣಿ ವಾಕಿಂಗ್ ಹೋಗಿದ್ದಾಗ ಅದೇ ಏರಿಯಾದ ಇಬ್ಬರು ಯುವಕರು ಆಕೆಯೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದರು. ಆಗ ಆಕೆ ಅಲ್ಲಿಂದ ಹೋಗಲು ಪ್ರಯತ್ನಿಸಿದಾಗ ಅವರಿಬ್ಬರು ಆಕೆಯ ಬಾಯಿಯನ್ನು ಮುಚ್ಚಿ, ಹತ್ತಿರದಲ್ಲಿದ್ದ ಮೈದಾನಕ್ಕೆ ಎಳೆದುಕೊಂಡು ಹೋದರು. ಅಲ್ಲಿ ಇನ್ನೊಬ್ಬನಿಗೆ ಫೋನ್ ಮಾಡಿದ ಅವರು ಆತನನ್ನು ಕೂಡ ಅಲ್ಲಿಗೆ ಬರಲು ಹೇಳಿದರು. ಬಳಿಕ ಮೂವರೂ ಸೇರಿ ಆ ಗರ್ಭಿಣಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.

ತನ್ನ ಮೇಲೆ ಅತ್ಯಾಚಾರ ನಡೆಸಿದ್ದನ್ನು ಆ ಮಹಿಳೆ ವಿರೋಧಿಸಿದಾಗ ಆ ಮೂವರು ಆಕೆಯನ್ನು ಥಳಿಸಿದ್ದಾರೆ. ಬಳಿಕ ಪ್ರಜ್ಞಾಹೀನಳಾಗಿ ಬಿದ್ದಿದ್ದ ಆಕೆಯನ್ನು ರೈಲ್ವೆ ಹಳಿಯ ಮೇಲೆ ಎಸೆದು ಹೋಗಿದ್ದಾರೆ. ಮಹಿಳೆ ಬಹಳ ಹೊತ್ತಿನ ಬಳಿಕ ತಾನೇ ಪ್ರಜ್ಞೆ ಪಡೆದ ನಂತರ ಜೋರಾಗಿ ಕಿರುಚಾಡಿದ್ದಾಳೆ. ಆ ಶಬ್ದ ಕೇಳಿ ಅಲ್ಲಿಗೆ ಬಂದ ಸರ್ಕಾರಿ ರೈಲ್ವೆ ಪೊಲೀಸ್ ಆಕೆಯನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಆ ಗರ್ಭಿಣಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಮೂವರು ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದ್ದು, ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಮೂರನೇ ಆರೋಪಿಯ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Related news

error: Content is protected !!