Friday, April 26, 2024
spot_imgspot_img
spot_imgspot_img

ಪೆನ್ಸಿಲ್ ಚಿತ್ರ ರಚಿಸಿ,ಪ್ರಧಾನಿ ನಿಧಿಗೆ ದೇಣಿಗೆ ನೀಡಿ ಭೇಷ್ ಎನಿಸಿದ ವಿದ್ಯಾರ್ಥಿನಿ..!

- Advertisement -G L Acharya panikkar
- Advertisement -

ಸುಳ್ಯ :ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ, ಕಡಬ ತಾಲೂಕಿನ ಕೋಡಿಬಾಳದ ಸುರಕ್ಷಾ ಕೋಲ್ಪೆ ತನ್ನಲ್ಲಿರುವ ಪೆನ್ಸಿಲ್ ಸ್ಕೆಚ್ ಹವ್ಯಾಸದಿಂದ ದೇಶಕ್ಕೆ ತನ್ನಿಂದಾದ ಸಹಾಯಹಸ್ತ ಚಾಚಲು ಮುಂದಾಗಿದ್ದಾಳೆ.

ಪ್ರಧಾನಿ ನರೇಂದ್ರ ಮೋದಿ, ಸಾಧಕಿ ಸುಧಾಮೂರ್ತಿ, ಅಣ್ಣಾಮಲೈ ಹೀಗೆ ಅನೇಕ ಖ್ಯಾತನಾಮರ ಪೆನ್ಸಿಲ್ ಸ್ಕೆಚ್‌ಗಳ ಭಾವಚಿತ್ರ ಈಗಾಗಲೇ ರಚಿಸಿ ಅವರಿಂದ ಶಹಭಾಷ್ ಗಿರಿ ಗಿಟ್ಟಿಸಿಕೊಂಡಿರುವ ತನ್ನ ಅಪ್ಪ ಅಮ್ಮ,ಅಕ್ಕನ ಚಿತ್ರಗಳನ್ನು ರಚಿಸಿದ್ದಾಳೆ. ಇದರಲ್ಲಿ ಸುಧಾಮೂರ್ತಿಯವರನ್ನು ಭೇಟಿಯಾಗಿ ತನ್ನ ಚಿತ್ರವನ್ನು ಅವರಿಗೆ ನೀಡಬೇಕೆಂಬ ಆಸೆ ಹೊಂದಿದ್ದಾಳೆ.

ಇದೀಗ ಈಕೆ ತಾನು ಕಲಿತಿರುವ ಕಾಲೇಜಿನ ಗುರುಗಳ ಚಿತ್ರವೊಂದನ್ನು ರಚಿಸಿ ಅವರ ಪ್ರೀತಿಗೂ ಪಾತ್ರರಾಗಿದ್ದಾಳೆ. ತಾನು ಮಾಡುವ ಕಲೆಗೆ ಸಂಭಾವನೆ ಬಯಸದ ಈಕೆ ತನ್ನ ಗುರುಗಳೊಬ್ಬರಿಗೆ ಗೌರವಪೂರ್ವಕವಾಗಿ ಮಾಡಿಕೊಟ್ಟ ಅವರದೇ ಚಿತ್ರಕ್ಕೆ ೨೦೦೦ರೂ ಗೌರವಧನ ನೀಡುವುದಾಗಿ ಹೇಳಿದಾಗ ಅದನ್ನು ಸುರಕ್ಷಾ ನಯವಾಗಿ ತಿರಸ್ಕರಿಸಿದ್ದಾಳೆ.ತಾವು ನೀಡುವ ಹಣದಲ್ಲಿ ಬೇಕಾದಷ್ಟು ಇರಿಸಿಕೊಂಡು ಉಳಿದ ಹಣವನ್ನು ಪ್ರಧಾನಿಗಳ ಪರಿಹಾರ ನಿಧಿಗೆ ಕೊಡು ಎಂಬ ಗುರುಗಳ ಸಲಹೆಯನ್ನು ಅನುಸರಿಸಿದ ಸುರಕ್ಷಾ ತನಗೆ ದೊರೆತ ಅಷ್ಟೂ ಹಣವನ್ನು ಪ್ರಧಾನಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾಳೆ. ಮುಂದೆ ನಾಗರಿಕ ಸೇವೆಯಲ್ಲಿ ಐಪಿಯಸ್ ಅಧಿಕಾರಿಯಾಗಬೇಕೆಂಬ ಕನಸು ಹೊತ್ತಿರುವ ಸುರಕ್ಷಾ ಕಲಿಕೆಯ ಜೊತೆಗೆ ತನ್ನ ಕಲೆಯನ್ನೂ ಮುಂದುವರೆಸಿದ್ದಾಳೆ.

ಪ್ರತಿ ಸ್ಕೆಚ್ ಗಳಿಂದ ಬರುತ್ತಿರುವ ಸಂಪೂರ್ಣ ಹಣವನ್ನು ಆಕೆ ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡುತ್ತಾ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಇತರರಿಗೆ ಮಾದರಿಯಾಗಿದ್ದಾಳೆ. ಕಲಿಕೆಯಲ್ಲಿ ಮುಂದಿರುವ ಸುರಕ್ಷಾ ಕಡಬ ತಾಲೂಕಿನ ಕೊಡಿಂಬಾಳ ಗ್ರಾಮದ ಪೂವಪ್ಪ ಗೌಡ ಮತ್ತು ಗುಲಾಬಿ ದಂಪತಿಗಳ ಪುತ್ರಿ.

- Advertisement -

Related news

error: Content is protected !!