Thursday, March 28, 2024
spot_imgspot_img
spot_imgspot_img

ಪುತ್ತೂರು: ಕೇಂದ್ರ ಸರಕಾರದ ‘ಫರ್ಟಿಲೈಸರ್ ಅಡ್ವೈಸರ್ ಫಾರಂ’ಗೆ ಸದಸ್ಯರಾಗಿ ರಾಜರಾಮ ಶೆಟ್ಟಿ ಕೋಲ್ಪೆಗುತ್ತು ಆಯ್ಕೆ

- Advertisement -G L Acharya panikkar
- Advertisement -

ಪುತ್ತೂರು: ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಫರ್ಟಿಲೈಸರ್ ಅಡ್ವೈಸರ್ ಫಾರಂ(ಎಫ್.ಎ.ಎಫ್) ಗೆ ಸದಸ್ಯರಾಗಿ ದಕ್ಷಿಣ ಕನ್ನಡದಿಂದ ರಾಜರಾಮ ಶೆಟ್ಟಿ ಕೋಲ್ಪೆಗುತ್ತು ಆಯ್ಕೆಯಾಗಿದ್ದಾರೆ.ಆಯ್ಕೆಯಾದ ಪದಾಧಿಕಾರಿಗಳಿಗೆ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಅಭಿನಂದಿಸಲಾಯಿತು.

2 ವರ್ಷಗಳ ಅವಧಿಯ ಎಫ್.ಎ.ಎಫ್ ಸದಸ್ಯತನಕ್ಕೆ ದೇಶದ ವಿವಿಧ ರಾಜ್ಯಗಳಿಂದ ಸದಸ್ಯರ ಆಯ್ಕೆ ನಡೆಯುತ್ತದೆ.

ಕೃಷಿ ಕ್ಷೇತ್ರದ ಸಾಧಕರನ್ನು ಈ ಆಯ್ಕೆ ನಡೆಸಲಾಗುತ್ತದೆ. ಆಯಾಯ ಪ್ರದೇಶದ ಕೃಷಿ ಹಾಗೂ ರಸಗೊಬ್ಬರದ ಬಗ್ಗೆ ಈ ಮಂಡಳಿ ಕಾರ್ಯನಿರ್ವಹಿಸಲಿದೆ.

ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಇವರು ಇಡ್ಕಿದು ಎಸ್.ಸಿ ಬ್ಯಾಂಕ್ ನ ಮಾಜಿ ಅಧ್ಯಕ್ಷರಾಗಿ, ಎಪಿಎಂಸಿ ಬಂಟ್ವಾಳ ಮಾಜಿ ನಿರ್ದೇಶಕರಾಗಿ, ಸ್ಕಾಡ್ಸ್ ನ ಮಾಜಿ ನಿರ್ದೇಶಕರಾಗಿ, ಬಿಜೆಪಿ ರೈತ ಮೋರ್ಚಾ ಪುತ್ತೂರು ತಾಲೂಕು ಮಾಜಿ ಅಧ್ಯಕ್ಷ ರಾಗಿ, ಪ್ರಸ್ತುತ ಜೇನು ಸೊಸೈಟಿ ನಿರ್ದೇಶಕರಾಗಿ, ಕೋಲ್ಪೆ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಸಾಜ. ಪುರುಷೋತ್ತಮ ಮುಂಗ್ಲಿಮನೆ. ಯಾದವ. ರಮೇಶ್ ಭಟ್. ಜಗದೀಶ್ ದೇವಸ್ಯ,ರುಕ್ಮಯ್ಯ ಉಪಸ್ಥಿತರಿದ್ದರು.

- Advertisement -

Related news

error: Content is protected !!