Thursday, July 23, 2026
spot_imgspot_img
spot_imgspot_img

ಪೆರುವಾಯಿ: (ಡಿ. 20)- 10 ನೇ ವರ್ಷದ ಗೋಪೂಜೆ, ಸಾರ್ವಜನಿಕ ಶ್ರೀ ಲಕ್ಷ್ಮೀ ಕಲ್ಪೋಕ್ತ ಪೂಜೆ ಹಾಗೂ ಹಿಂದೂ ಹೃದಯ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

- Advertisement -
- Advertisement -

ಪೆರುವಾಯಿ: ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಘಟಕ, ಶ್ರೀ ಕೃಷ್ಣ ಶಾಖೆ ಪೆರುವಾಯಿ ಹಾಗೂ ಹಿಂದೂ ಹೃದಯ ಸಂಗಮ ಸಮಿತಿ ಪೆರುವಾಯಿ ಇವುಗಳ ಜಂಟಿ ಆಶ್ರಯದಲ್ಲಿ 10 ನೇ ವರ್ಷದ ಗೋಪೂಜೆ, ಸಾರ್ವಜನಿಕ ಶ್ರೀ ಲಕ್ಷ್ಮೀ ಕಲ್ಪೋಕ್ತ ಪೂಜೆ ಹಾಗೂ ಹಿಂದೂ ಹೃದಯ ಸಂಗಮ ಕಾರ್ಯಕ್ರಮ ಡಿ. 20 ರಂದು ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನ. 9 ನೇ ಆದಿತ್ಯವಾರ ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು.

ಆಮಂತ್ರಣ ಪತ್ರಿಕೆಯನ್ನು ಬಾಯಾರು ಸರ್ವೀಸ್ ಕೋ-ಓಪರೇಟಿವ್ ಬ್ಯಾಂಕ್‌ ನ ಸಂತೋಷ್‌ ಭಂಡಾರಿ ಪಟ್ಲ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರು ಸಚಿನ್‌ ಅಡ್ವಾಯಿ, ಪ್ರಭಾಕರ ಶೆಟ್ಟಿ ಕಳೈತ್ತಿಮಾರ್‌, ಯೋಗೀಶ್‌ ಆಳ್ವ ಕಳೈತ್ತಿಮಾರ್‍, ಮಂಜುನಾಥ ಆಚಾರ್ಯ
, ವಿಶ್ವನಾಥ ಪೂಜಾರಿ ಕಲ್ಲಡ್ಕ, ಯತೀಶ್‌ ಪೆರುವಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೋಕ್ಷಿತ್‌ ಪೆರುವಾಯಿ ಸ್ವಾಗತಿಸಿ, ನಿತೇಶ್‌ ಶೆಟ್ಟಿ ಪೆರುವಾಯಿ ವಂದಿಸಿದರು. ಅಶ್ವಿನಿ ಪೆರುವಾಯಿ, ಹಾಗೂ ಭಾಷಾ ಶೆಟ್ಟಿ ಪ್ರಾರ್ಥಿಸಿದರು. ನಾಗೇಶ್‌ ಮಾಸ್ಟರ್‌ ಕೊಲ್ಲತ್ತಡ್ಲ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!