Friday, April 26, 2024
spot_imgspot_img
spot_imgspot_img

ನವೆಂಬರ್​ ತಿಂಗಳಲ್ಲಿ 3 ಬಾರಿ ಮುಖಾಮುಖಿಯಾಗಲಿದ್ದಾರೆ ಪ್ರಧಾನಮಂತ್ರಿ ಮೋದಿ-ಚೀನಾ ಅಧ್ಯಕ್ಷ ಶಿ ಜಿನ್​ಪಿಂಗ್

- Advertisement -G L Acharya panikkar
- Advertisement -

ನವದೆಹಲಿ(ನ.3): ಭಾರತ ಚೀನಾ ಗಡಿಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರೆದ ನಡುವೆಯೂ ಇತ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಶಿ ಜಿನ್​ಪಿಂಗ್ ​ಮುಖಾಮುಖಿ ಭೇಟಿಗೆ ವೇದಿಕೆ ಸಿದ್ಧವಾಗುತ್ತಿದೆ. ಈ ನವೆಂಬರ್​ ತಿಂಗಳಲ್ಲಿ 3 ಬಾರಿ ಮೋದಿ ಮತ್ತು ಶಿ ಜಿನ್​ಪಿಂಗ್ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖಾಮುಖಿಯಾಗಲಿದ್ದಾರೆ.

ನವೆಂಬರ್ 10 ರಂದು ನಡೆಯಲಿರುವ ಶಾಂಘೈ ಕೊ-ಆಪರೇಷನ್ ಆರ್ಗನೈಸೇಷನ್​ ಹೆಡ್ಸ್ ಆಫ್ ಸ್ಟೇಟ್​ ಸಮ್ಮಿಟ್(SCO), ನವೆಂಬರ್ 17ರಂದು ನಡೆಯಲಿರುವ ಬ್ರೆಜಿಲ್, ರಷ್ಯಾ, ಇಂಡಿಯಾ, ಚೈನಾ ಮತ್ತು ಸೌತ್ ಆಫ್ರಿಕಾ ದೇಶಗಳ ಸಭೆ(BRICS) ಹಾಗೂ ನವೆಂಬರ್ 21-22 ರಂದು ನಡೆಯಲಿರುವ ಜಿ-20 ಸಭೆಯಲ್ಲಿ ಉಭಯ ನಾಯಕರು ಮುಖಾಮುಖಿಯಾಗಲಿದ್ದಾರೆ.

ಬ್ರಿಕ್ಸ್ ಮತ್ತು ಎಸ್​ಸಿಓ ಸಭೆಯ ರಷ್ಯಾ ನೇತೃತ್ವದಲ್ಲಿ ನಡೆಯಲಿದ್ದರೆ ಜಿ-20 ಸಭೆ ಸೌದಿ ಅರೇಬಿಯಾ ನೇತೃತ್ವದಲ್ಲಿ ನಡೆಯಲಿದೆ. ದೇಶದ ಗಡಿಯಲ್ಲಿ ಚೀನಾ ಮತ್ತು ಭಾರತ ದೇಶಗಳ ನಡುವಿನ ಸೈನಿಕರ ಘರ್ಷಣೆಯ ನಂತರ ಇದೇ ಮೊದಲ ಬಾರಿಗೆ ಉಭಯ ನಾಯಕರು ಮುಖಾಮುಖಿಯಾಗಲಿರುವ ಹಿನ್ನೆಲೆ ಈ ಸರಣಿ ವರ್ಚುವಲ್ ಮೀಟಿಂಗ್​ಗಳು ಮಹತ್ವ ಪಡೆದುಕೊಂಡಿವೆ.

- Advertisement -

Related news

error: Content is protected !!