ಫಿಲಿಫೈನ್(ಅ.28): ಫಿಲಿಫೈನ್ಸ್ನಲ್ಲಿ ಅಕ್ರಮ ಕೋಳಿ ಜಗಳ ಸ್ಪರ್ಧೆಯ ವಿರುದ್ಧದ ಕಾರ್ಯಾಚರಣೆ ವೇಳೆ ಈ ಘಟನೆ ನಡೆದಿದೆ. ಕೋಳಿ ಜಗಳದ ವೇಳೆ ಕಟ್ಟಲಾಗುವ ಬ್ಲೇಡ್ನಿಂದ ಅಧಿಕಾರಿ ಬಲಿಯಾಗಿದ್ದಾರೆ.

ಫಿಲಿಫೈನ್ಸ್ನ ಉತ್ತರ ನಾರ್ಥರನ್ ಸಮರ್ನಲ್ಲಿ ನಡೆದಿದೆ. ಕೋಳಿ ಬ್ಲೇಡ್ ದಾಳಿಗೆ ಲೆಫ್ಟಿನೆಂಟ್ ಕ್ರಿಶ್ಚಿಯನ್ ಮೃತಪಟ್ಟಿದ್ದಾರೆ. ಎಡಭಾಗದ ಕಾಲಿನ ತೊಡೆಯ ನಾಡಿಯಲ್ಲಿ ಬ್ಲೇಡ್ ಸಿಲುಕಿಕೊಂಡಿತ್ತು. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾರೆಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಕರ್ನಲ್ ಅರ್ನೆಲ್ ಅಪುಡ್ ಮಾಹಿತಿ ನೀಡಿದ್ದಾರೆ.

ಕೋಳಿ ಜಗಳ ಸ್ಪರ್ಧೆ ಅಥವಾ ಟಪಡಾ ಫಿಲಿಫೈನ್ನ ಪ್ರಸಿದ್ಧ ರಕ್ತಸಿಕ್ತ ಸ್ಪರ್ಧೆಯಾಗಿದೆ. ಇದೊಂದು ಬೆಟ್ಟಿಂಗ್ ದಂಧೆಯಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರಬಾರದೆಂಬ ಕಾರಣಕ್ಕೆ ಫಿಲಿಫೈನ್ನಲ್ಲಿ ಈ ಸ್ಪರ್ಧೆಯನ್ನು ಬ್ಯಾನ್ ಮಾಡಲಾಗಿದೆ. ಆದರೂ ನಡೆಯುತ್ತಿದ್ದ ಸ್ಪರ್ಧೆ ನಿಲ್ಲಿಸಲು ಹೋದ ಪೊಲೀಸ್ ಅಧಿಕಾರಿ ಬಲಿಯಾಗಿದ್ದಾರೆ. ಫಿಲಿಫೈನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿ ಇಂಥ ಅಪರೂಪದ ಪ್ರಕರಣ ನಡೆದಿದೆ. ಸ್ಪರ್ಧೆ ಆಯೋಜಿಸಿದ್ದ ಮೂವರನ್ನು ಬಂಧಿಸಲಾಗಿದ್ದು, ಎರಡು ಕೋಳಿಗಳನ್ನು ವಶಕ್ಕೆ ಪಡೆಯಲಾಗಿದೆ.










