

ವಿಟ್ಲ: ಸುಮಾರು 800 ವರ್ಷಗಳ ಇತಿಹಾಸವಿರುವ ಕೇಪು ಶ್ರೀ ಉಳ್ಳಾಲ್ತಿ ದೈವಸ್ಥಾನವು ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಜಾತ್ರೋತ್ಸವ ನಡೆದು ನಂತರ ಕೋಳಿ ಅಂಕ ನಡೆಯುವ ಪ್ರತೀತಿ ಅನೇಕ ವರ್ಷಗಳಿಂದ ನಡೆದು ಬಂದಿದೆ.

ಡಿ. 16ರಂದು ವಿಶೇಷವಾಗಿ ಮಕ್ಕಳ ಕಜಂಬು ಉತ್ಸವ ಜಾತ್ರೋತ್ಸವ ನಡೆದು, ಇಂದು ಕೋಳಿ ಅಂಕ ನಡೆದಿದ್ದು ಕೋಳಿ ಅಂಕಕ್ಕೆ ಜಿಲ್ಲಾ ವರಿಷ್ಠಾಧಿಕಾರಿಯವರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ಮಾಹಿತಿ ಇತ್ತು.



ಇಂದು ಮಧ್ಯಾಹ್ನ 1 ಗಂಟೆಗೆ ಕೋಳಿ ಗುಂಟ ನಡೆದು ಕೋಳಿ ಅಂಕ ಆರಂಭವಾಗುತ್ತಿದ್ದಂತೆ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಕೋಳಿ ಅಂಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಪು ಜಾತ್ರೆ ಮತ್ತು ಕೋಳಿ ಅಂಕದ ವಿಶೇಷತೆ ಏನೆಂದರೆ ಇಲ್ಲಿ ಯಾವುದೇ ಸಂತೆ ಮಾರಾಟವಿಲ್ಲ, ಮತ್ತು ಇಲ್ಲಿ ಕೋಳಿ ಅಂಕದಲ್ಲಿ ಯಾವುದೇ ಜುಜೂ ಅಥವಾ ಹಣದ ವ್ಯವಹಾರ ನಡೆಯುವುದಿಲ್ಲ. ಇದು ಅನೇಕ ವರ್ಷಗಳಿಂದ ನಡೆದು ಬಂದ ಸಂಪ್ರದಾಯ. ಪ್ರತೀ ಊರಿನ ಒಬ್ಬರು ಇಲ್ಲಿನ ಒಂದು ಕೋಳಿ ಅಂಕಕ್ಕೆ ಹರಕೆ ರೂಪದಲ್ಲಿ ಕೋಳಿ ತರುತ್ತಾರೆ. ಹಾಗೇ ಇಂದು ನಡೆದು ಕೋಳಿ ಅಂಕದಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ಜನ ಮೀರಿ ಬೇರೆ ಬೇರೆ ಊರಿನಿಂದ ಬಂದು ಭಾಗವಹಿಸಿದ್ದರು.
ಇಂದು ಮಧ್ಯಾಹ್ನ ಕೋಳಿ ಅಂಕ ಆರಂಭವಾಗಿದ್ದು, ಪೊಲೀಸರು ಅಡ್ಡಿಪಡಿಸಿದ ಹಿನ್ನಲೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಕುದ್ದು ಕೋಳಿ ಅಂಕದ ಸ್ಥಳಕ್ಕೆ ಆಗಮಿಸಿ ಯಾರೂ ಓಡಬೇಡಿ ಕೋಳಿ ಅಂಕ ಸಂಜೆವರೆಗೆ ನಡೆದೇ ನಡೆಯುತ್ತದೆ ನಾನು ಕೂಡ ನಿಮ್ಮ ಜೊತೆಗೆ ಇರುತ್ತೇನೆಂದು ಹೇಳಿ ಸಂಜೆ 5 ಗಂಟೆಗೆವರೆಗೆ ಕುದ್ದು ತಾವೇ ಸ್ಥಳದಲ್ಲಿ ನಿಂತು ಜನರೊಂದಿಗೆ ಬೆರೆತು ಕೋಳಿ ಅಂಕ ನಡೆಸಿದ್ದಾರೆ. ಶಾಸಕರ ಈ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಂತರ ಮಾಧ್ಯಮದ ಜೊತೆ ಮಾತನಾಡಿದ ಶಾಸಕರು 800 ವರ್ಷಗಳ ಇತಿಹಾಸವಿರುವ ಈ ಕ್ಷೇತ್ರದಲ್ಲಿ ಇಲ್ಲಿ ಪ್ರತಿ ವರ್ಷ ಕೋಳಿ ಅಂಕ ನಡೆಯುತ್ತದೆ. ಇದು ಧಾರ್ಮಿಕ ಭಾವನೆ. ಈ ಊರಿನ ಎಷ್ಟೋ ಜನ, ನಮ್ಮ ವಿಧಾನ ಸಭಾ ಕ್ಷೇತ್ರದ ಜನ ಅವರಿಗೆ ಅವರ ಕುಟುಂಬಕ್ಕೆ ತೊಂದರೆಯಾದರೆ ಈ ಉಳ್ಳಾಲ್ತಿ ಕ್ಷೇತ್ರಕ್ಕೆ ಹರಕೆ ಹೇಳುತ್ತಾರೆ. ಇದು ಮೊದಲಿನಿಂದ ಬಂದ ಪದ್ದತಿ. ಇಲ್ಲಿ ಯಾವುದೇ ಜೂಜುಗಳಿಲದಲ, ಆಟೋ ರಿಕ್ಷಾದವರು ಕೂಡ ಫ್ರೀಯಾಗಿ ಬಂದು ಬಿಡುತ್ತಾರೆ. ಇಲ್ಲಿ ಎಲ್ಲವೂ ಫ್ರೀ. ಪ್ರೀತಿಯಿಂದ ಸಾಕಿದ ಕೋಳಿಯನ್ನು ಹರಕೆ ರೂಪದಲ್ಲಿ ಬಂದು ಕೋಳಿ ಅಂಕ ಮಾಡಿ ಅದನ್ನು ರೈತರು ತೆಗೆದುಕೊಂಡು ಹೋಗುವುದು. ನಮಗೆ ಗೊತ್ತಿದೆ ಕಾನೂನಿನಲ್ಲಿ ಅವಕಾಶವಿಲ್ಲ ಆದರೆ ಜನರ ಧಾರ್ಮಿಕ ಭಾವನೆಗಳು ಇದೆ ಅದಕ್ಕೆ ನಾವು ಅಧಿಕಾರಿ ಜೊತೆ 3 ಗಂಟೆ ಕಾಲ ಅವಕಾಶ ಕೊಡಿ ಯಾವುದೇ ಜೂಜುಗಳಿಲ್ಲ ಎಂದು ಮನವಿ ಮಾಡಿದ್ದೇವೆ. ಆದರೂ ಕೂಡು ಇಂದು ಪೊಲೀಸ್‌ನವರು ಬಂದು ಚದುರಿಸುವಂತ ಪ್ರಯತ್ನವನ್ನು ಮಾಡಿದ್ರು, ನನಗೆ ನಮ್ಮ ವಿಧಾನಸಭಾ ಕ್ಷೇತ್ರದ ಎಲ್ಲಾ ಜನರು ಕೂಡ ನೀವು ಶಾಸಕರಾಗಿದ್ದೀರಿ, ನಮ್ಮ ಧರ್ಮವನ್ನು ಕಿತ್ತುಕ್ಕೊಳ್ಳುವ ಪ್ರಯತ್ನ ಆಗುತ್ತಿದೆ ನಮಗೆ ಅದಕ್ಕೂ ಕೂಡ ಯಾವುದೇ ಸ್ವಾತಂತ್ರ ಇಲ್ಲ ಅನ್ನುವ ಮಾತು ನಮ್ಮ ಗಮನಕ್ಕೆ ಬಂತು ನಾನು ಕೂಡ ಬಂದಿದ್ದೇ, ನಾನ 3 ಗಂಟೆ ಅವರ ಜೊತೆ ಸೇರಿ ನಮ್ಮ ಹರಕೆಯನ್ನು ಜನ ಮಾಡುವಂತಹ ಕೆಲಸವನ್ನು ಮಾಡಿದ್ದೇವೆ. ಕಾನೂನು ವಿರುದ್ದವಾಗಿ ಯಾವುದು ಮಾಡಿಲ್ಲ ಈಗ ಎಲ್ಲ ಅವರ ಕೆಲಸವನ್ನು ಮುಗಿಸಿ ಹೋಗುವಂತಹ ಕೆಲಸ ಆಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.








