



ಕಡಬ:ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನ ಚಾಕೋಟೆತ್ತಡಿ (ಮಾಡ) ಪಾಲ್ತಾಡಿ ಇಲ್ಲಿನ ಶ್ರೀ ಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವವು ಏಪ್ರಿಲ್ 22 ಬುಧವಾರದಿಂದ ಏಪ್ರಿಲ್ 24 ಶುಕ್ರವಾರದವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಬಣೆಯಿಂದ ನೆರವೇರಲಿರುವುದು.
ಏಪ್ರಿಲ್ 22 ಬುಧವಾರದಂದು ಪೂರ್ವಾಹ್ನ ಗಂಟೆ 10ಕ್ಕೆ ಮುಂಡ್ಯೆ ಆರೋಹಣ, ಏಪ್ರಿಲ್ 23 ಗುರುವಾರದಂದು ಪೂರ್ವಾಹ್ನ ಗಂಟೆ 9ಕ್ಕೆ
ತಳಿರು ತೋರಣ, ಪೂರ್ವಾಹ್ನ ಗಂಟೆ 10ಕ್ಕೆ ಹಸಿರು ಹೊರೆಕಾಣಿಕೆ, ರಾತ್ರಿ ಗಂಟೆ 7ಕ್ಕೆ ಭಂಡಾರ ತೆಗೆಯುವುದು, ರಾತ್ರಿ ಗಂಟೆ 7.30ಕ್ಕೆ
ಹೋಮ, ರಾತ್ರಿ ಗಂಟೆ 8.30ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 9.30ಕ್ಕೆ ಕಾಪು ರಂಗತರಂಗ ಕಲಾವಿದರಿಂದ ಸಾಮಾಜಿಕ ಹಾಸ್ಯಮಯ ನಾಟಕ “ಶೋಭಾಜಿ” ಪ್ರದರ್ಶನಗೊಳ್ಳಲಿದೆ.
ಏಪ್ರಿಲ್ 24 ಶುಕ್ರವಾರ ಪೂರ್ವಾಹ್ನ ಗಂಟೆ 6.30ಕ್ಕೆ ಉಳ್ಳಾಕುಲು ಸಿರಿಮುಡಿ ಗಂಧಪ್ರಸಾದ, ಪೂರ್ವಾಹ್ನ ಗಂಟೆ 11ಕ್ಕೆ ಪಿಲಿಚಾಮುಂಡಿ ದೈವದ ಭಂಡಾರ ತೆಗೆಯುವುದು, ಪೂರ್ವಾಹ್ನ 11.30ಕ್ಕೆ ಕೊಳ್ಳಿಕುಮಾರ ದೈವದ ನೇಮ, ಮಹಿಷಂತಾಯ ದೈವದ ನೇಮ, ಪೂರ್ವಾಹ್ನ ಗಂಟೆ 12ಕ್ಕೆ ಕೊಡಮಣಿತ್ತಾಯ ದೈವದ ವಲಸರಿ ನೇಮೋತ್ಸವ, ಮಧ್ಯಾಹ್ನ ಗಂಟೆ 1ಕ್ಕೆ ಅನ್ನಸಂತರ್ಪಣೆ,ಅಪರಾಹ್ನ ಗಂಟೆ 2ಕ್ಕೆಪುರುಷ ದೈವದ ನೇಮೋತ್ಸವ, ಅಪರಾಹ್ನ ಗಂಟೆ 2.30ಕ್ಕೆ ಪಂಜುರ್ಲಿ ದೈವದ ನೇಮೋತ್ಸವ, ಅಪರಾಹ್ನ ಗಂಟೆ 4ಕ್ಕೆ ವ್ಯಾಘ್ರ ಚಾಮುಂಡಿ (ಪಿಲಿಭೂತ) ವಲಸರಿ ನೇಮೋತ್ಸವ, ರಾತ್ರಿ ಗಂಟೆ 7ಕ್ಕೆ ಮುಂಡ್ಯೆ ಅವರೋಹಣಗೊಳ್ಳಲಿದೆ







