Tuesday, July 21, 2026
spot_imgspot_img
spot_imgspot_img

ಸ್ವಾತಂತ್ರೋತ್ಸವದ ಅಂಗವಾಗಿ ಕೆಲಿಂಜ ಸರಕಾರಿ ಶಾಲೆಗೆ ಪ್ರಿಂಟರ್ ಮೆಷೀನ್‌ ಕೊಡುಗೆ

- Advertisement -
- Advertisement -

ಕೆಲಿಂಜ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಲಿಂಜ, ಇಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಮೋಹಿತ್ ಶೆಟ್ಟಿ ಕೆಲಿಂಜ ನೆರವೇರಿಸಿದರು. ನಂತರ ಸ್ವಾತಂತ್ರ್ಯ ಚಳುವಳಿಯ ಘೋಷಣೆಯೊಂದಿಗೆ ಜಾಥಾ ನಡೆಸಲಾಯಿತು.

ಸ್ವಾತಂತ್ರೋತ್ಸವದ ಅಂಗವಾಗಿ ಶಾಲಾ ಪೋಷಕರ, ಶಾಲಾಭಿವೃದ್ಧಿ ಸಮಿತಿಯ, ಹಳೆ ವಿದ್ಯಾರ್ಥಿ ಸಂಘದ ಹಾಗೂ ದಾನಿಗಳ ದೇಣಿಗೆಯ ಸಂಗ್ರಹದಿಂದ ಶಾಲೆಗೆ ಪ್ರಿಂಟರ್ ಮೆಷೀನ್‌ನ್ನು ಕೊಡುಗೆಯಾಗಿ ನೀಡಲಾಯಿತು.

ಇಲಾಖೆಯಿಂದ ಎಸ್.ಎಸ್.ಎ. ಶಾಲಾ ಅನುದಾನದಿಂದ ಬಿಡುಗಡೆಯ ವೆಚ್ಚದಿಂದ ಖರೀದಿಸಿದ ಕ್ರೀಡಾ ಸಾಮಗ್ರಿಗಳನ್ನು ಶಾಲೆಗೆ, ಅತಿಥಿಗಳಿಂದ ಹಸ್ತಾಂತರಿಸಲಾಯಿತು. ವಿದ್ಯಾರ್ಥಿಗಳ ದೇಶಭಕ್ತಿ ಗೀತೆ ಹಾಗೂ ವಿವಿಧ ನೃತ್ಯ ವೈಭವ ನಡೆಯಿತು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ ಜಯಂತಿ, ಎಸ್.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲತಡ್ಕ, ಉಪಾಧ್ಯಕ್ಷ ಹಮೀದ್ ಗೋಲ್ಡ್ ಸ್ಟಾರ್, ಕಾರ್ಯದರ್ಶಿ ಸಂತೋಷ್ ಶೆಟ್ಟಿ ಸೀನಾಜೆ, ಕೋಶಾಧಿಕಾರಿ ದೇವಪ್ಪ ಗೌಡ, ವೀರಕಂಬ ಗ್ರಾಮ ಪಂಚಾಯತಿನ ಸದಸ್ಯರಾದ ಸಂದೀಪ್ ಪೂಜಾರಿ ಕೆಲಿಂಜ, ಜಯಪ್ರಸಾದ್ ರೈ ಕಲ್ಮಲೆ‌. ವಿದ್ಯಾರ್ಥಿಗಳ ಪೋಷಕರು, ಹಳೆ ವಿದ್ಯಾರ್ಥಿಗಳು, ಶಾಲಾ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಉಷಾ ಸುವರ್ಣ ಸ್ವಾಗತಿಸಿ, ಶಿಕ್ಷಕಿ ನಳಿನಾಕ್ಷಿ ವಂದಿಸಿ, ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!