

ಬಂಗೇರ ಕುಟುಂಬಸ್ಥರ ನೂತನ ತರವಾಡು ಮನೆಯ ಗೃಹಪ್ರವೇಶ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಕೋಲೋತ್ಸವ ಏ.1 ರಿಂದ ಏ 4 ತನಕ ನಡೆಯಲಿದೆ.
ದಿನಾಂಕ 02-04-2025ನೇ ಬುಧವಾರದಿವಾ ಘಂಟೆ 9.52ಕ್ಕೆ ನಡೆಯುವ ವೃಷಭ ಲಗ್ನ ಸುಮುಹೂರ್ತದಲ್ಲಿ ಬಂಗೇರ ಕುಟುಂಬಸ್ಥರ ತರವಾಡು ಮನೆ ಇದರ ಗೃಹಪ್ರವೇಶವನ್ನು ಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ,ಹಾಗೂ ಪಡ್ಡಂದಾಯ ಬಂಟ ದೈವ, ಮಂತ್ರ ದೇವತೆ, ಹಿರಿಯಜ್ಜ, ಕುಪ್ಪೆಟ್ಟು ಕಲ್ಲುರ್ಟಿ ಪಂಜುರ್ಲಿ, ಕುಟುಂಬದ ಕಲ್ಲುರ್ಟಿ ಪಂಜುರ್ಲಿ ಮತ್ತು ರಾಹು ಗುಳಿಗ ದೈವಗಳ ಪ್ರತಿಷ್ಠೆಯುದೈಲ ರಾಮಚಂದ್ರ ಭಟ್ ಇವರ ನೇತೃತ್ವದಲ್ಲಿ ನಡೆಯಲಿದೆ.
ದಿನಾಂಕ : 01-04-2025ನೇ ಮಂಗಳವಾರರಾತ್ರಿ ಗಂಟೆ 9.00ಕ್ಕೆ : ವಾಸ್ತು ಪೂಜೆ, ಅನ್ನಸಂತರ್ಪಣೆ ನಡೆಯಲಿದೆ.ದಿನಾಂಕ : 02-04-2025ನೇ ಬುಧವಾರ ಬೆಳಗ್ಗೆ – ಗಣಪತಿ ಹವನ ಮಂತ್ರದೇವತೆ, ಹಿರಿಯಜ್ಜ, ಬಂಟ ದೈವ, ಕುಪ್ಪೆಟ್ಟು ಕಲ್ಲುರ್ಟಿ ಪಂಜುರ್ಲಿ, ಕುಟುಂಬದ ಕಲ್ಲುರ್ಟಿ ಪಂಜುರ್ಲಿ, ರಾಹು ಗುಳಿಗ ದೈವಗಳ ಪ್ರತಿಷ್ಠೆ, ನಾಗದೇವರಿಗೆ ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ ಮತ್ತು ವೆಂಕಟರಮಣ ದೇವರಿಗೆ ಮುಡಿಪುಮಧ್ಯಾಹ್ನ ಗಂಟೆ 1.00ಕ್ಕೆ : ಅನ್ನಸಂತರ್ಪಣೆಸಂಜೆ ಗಂಟೆ 4.00ಕ್ಕೆ : ಕೆಲಿಂಜೇಶ್ವರಿ ಮಕ್ಕಳ ಕುಣಿತ ಭಜನಾ ಮಂಡಳಿ, ಕೆಲಿಂಜ – ಇವರಿಂದ ಕುಣಿತ ಭಜನಾ ಕಾರ್ಯಕ್ರಮ ಸಂಜೆ ಗಂಟೆ 6.00ಕ್ಕೆ : ದೈವಗಳ ಭಂಡಾರ ಏರಿಸುವುದು ರಾತ್ರಿ ಗಂಟೆ 7.00ಕ್ಕೆದೈವಗಳ ಕೋಲೋತ್ಸವ ರಾತ್ರಿ ಗಂಟೆ 8.00ಕ್ಕೆ : ಅನ್ನಸಂತರ್ಪಣೆ ಮತ್ತು ಅದೇ ದಿನ ರಾತ್ರಿದೈವಗಳ ಕೋಲೋತ್ಸವ ಜರಗಲಿದೆ.ದಿನಾಂಕ : 03-04-2025ನೇ ಗುರುವಾರ ಕುರಿತಂಬಿಲ ದಿನಾಂಕ : 04-04-2025ನೇ ಶುಕ್ರವಾರ ವರ್ಷದ ಪರ್ವ ಸೇವೆ ನಡೆಯಲಿದೆ.








