


ಧ್ವನಿ ಬೆಳಕು ಸಂಯೋಜಕ ಒಕ್ಕೂಟ ರಿ. ಬಂಟ್ವಾಳ ತಾಲೂಕು ಇದರ 9ನೇ ವಾರ್ಷಿಕ ಮಹಾಸಭೆ ಲಯನ್ಸ್ ಕ್ಲಬ್ ಬಿ. ಸಿ ರೋಡ್ ನಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕಿನ ಅಧ್ಯಕ್ಷರು ಧನ್ ರಾಜ್ ಶೆಟ್ಟಿ ಫರಂಗಿಪೇಟೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಕಾನೂನೂ ಸಲಹೆಗಾರದ ಜಯರಾಮ್ ರೈ ವಕೀಲರು, ಧ್ವನಿವರ್ದಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘ ಕಾರ್ಯದರ್ಶಿ ಮಹೇಶ್ ಬೊಳಾರು, ಕೋಶಾಧಿಕಾರಿ ಬೆನ್ಹಟ್ ಡಿ. ಸಿಲ್ಲ್ವ, ಬಂಟ್ವಾಳ ತಾಲೂಕು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಪೂಜಾರಿ, ಧ್ವನಿ ಬೆಳಕು ಸಂಯೋಜಕ ಒಕ್ಕೂಟ ರಿ. ಬಂಟ್ವಾಳ ತಾಲೂಕಿನ ಸ್ಥಾಪಕ ಅಧ್ಯಕ್ಷರು ರವಿವರ್ಮ ವಿಟ್ಲ, ಕಾರ್ಯದರ್ಶಿ ಸಂತೋಷ್ ಸುವರ್ಣ ಕುರಿಯಾಳ, ಕೋಶಾಧಿಕಾರಿ ಪ್ರಶಾಂತ್ ಕುಡಂಡ್ಕ ಇವರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಧನಂಜಯ ಶೆಟ್ಟಿ ಸರಪಾಡಿ ಇವರು ಸ್ವಾಗತಿಸಿದರು ಈ ಸಭೆಯಲ್ಲಿ ಹಿರಿಯ ಸದಸ್ಯರಿಗೆ ಸನ್ಮಾನ ಮತ್ತು ವೀಕಲ ಚೇತನಾ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಯಿತು.. ಸಭೆಗೆ ಲೊಹಿತ್ ಬ್ರಹ್ಮರಕೂಟ್ಲ ಧನ್ಯವಾದ ನೀಡಿದರು ಕಾರ್ಯಕ್ರಮದ ನಿರೂಪಣೆ ಇಸ್ಮಾಯಿಲ್ ಬನಾರಿ ಮಾಡಿದರು. ರಾಷ್ಟ್ರ ಗೀತೆಯ ಮೂಲಕ ಸಭೆಯು ಮುಕ್ತಾಯಗೊಂಡಿತು.








