Saturday, July 25, 2026
spot_imgspot_img
spot_imgspot_img

ಸಾಲೆತ್ತೂರು ವಲಯ ಬಂಟರ ಸಂಘದ ವತಿಯಿಂದ ‘ಬಂಟೆರ್ನ ಆಟಿದ ಅಜನೆ’ ಕಾರ್ಯಕ್ರಮ

- Advertisement -
- Advertisement -

ಸಾಲೆತ್ತೂರು ವಲಯ ಬಂಟರ ಸಂಘದ ವತಿಯಿಂದ ‘ಬಂಟೆರ್ನ ಆಟಿದ ಅಜನೆ’ ಕಾರ್ಯಕ್ರಮ ಆ.10-08-2025ನೇ ಆದಿತ್ಯವಾರಕುಡ್ತಮುಗೇರು ವಿಜಯಶ್ರೀ ಕಲ್ಯಾಣ ಮಂಟಪದಲ್ಲಿ ನಡೆಯಿತು.ಉದ್ಘಾಟನೆಯನ್ನು ವಿ.ಪಡ್ನೂರು ಪ್ರಾ.ಕ್ರ.ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಲಕ್ಷ್ಮೀನಾರಾಯಣ ಅಡ್ಯಂತಾಯ ನೆರವೇರಿಸಿದರು. ಸಾಲೆತ್ತೂರು ವಲಯ ಬಂಟರ ಸಂಘದ ಅಧ್ಯಕ್ಷ ಉದಯಕುಮಾರ್ ರೈ ಅಗರಿ ಅಧ್ಯಕ್ಷತೆ ವಹಿಸಿದರು. ಬಂಟ್ವಾಳ ವರ್ತಕರ ಸಹಕಾರಿ ಸಂಘ ಉಪಾಧ್ಯಕ್ಷ ಮಂಜುನಾಥ ರೈ, ಸಿರಿ ವಿದ್ಯಾಲಯ ಪಾಲ್ತಾಜೆ ಸಾಲೆತ್ತೂರು ಪ್ರಾಂಶುಪಾಲ ಶಾಲಿನಿ ಆರ್ ನೋಂಡ ಪಡಾರುಗುತ್ತು, ಬಂಟರ ಸಂಘ ಸಜೀಪ ವಲಯ ಅಧ್ಯಕ್ಷ ಸುರೇಶ್ ಶೆಟ್ಟಿ ಸಜೀಪ, ಸಾಲೆತ್ತೂರು ಮಹಿಳಾ ಘಟಕ ಬಂಟರ ಸಂಘದ ಗೌರವಾಧ್ಯಕ್ಷೆ ಗಾಯತ್ರಿ ಎಸ್ ಕೊಲ್ಲಾಡಿ, ಸಾಲೆತ್ತೂರು ವಲಯ ಬಂಟರ ಸಂಘದ ಗೌರವಾಧ್ಯಕ್ಷ ದೇವಪ್ಪ ಶೇಖ ಪೀಲ್ಯಡ್ಕ, ಕಾರ್ಯದರ್ಶಿ ಅರವಿಂದ ರೈ ಮೂರ್ಜೆಬೆಟ್ಟು, ಕೋಶಾಧಿಕಾರಿ ಪವಿತ್ರ ಪೂಂಜ ಕೋಡಂಗೆ, ಸಾಲೆತ್ತೂರು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸುನಿತಾ ಯು ರೈ ಗೌರಿಕೋಡಿ, ಕಾರ್ಯದರ್ಶಿ ವಿನುತಾ ಎ ಶೆಟ್ಟಿ ಕೊಲ್ಲಾಡಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅಧ್ಯಕ್ಷ ಉದಯ ಕುಮಾರ್ ರೈ ಅಗರಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ರೋಹಿತ್ ರೈ ಚೆಂಬರಡ್ಕ ಧನ್ಯವಾದಗೈದರು.ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ರೇಖಾ ಜೆ ಶೆಟ್ಟಿ ತೆಂಗಿನಗರಿ ಅರಳಿಸುವುದರ ಮೂಲಕ ನೇರವೆರಿಸಿದರು.

ಸಾಲೆತ್ತೂರು ವಲಯದ ಅಧ್ಯಕ್ಷ ಉದಯಕುಮಾರ್‌ ರೈ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದ ರೋಟರಿ ಕ್ಲಬ್‌ ಕಿನ್ನಿಗೋಳಿ ಅಧ್ಯಕ್ಷ ಸಾಯಿನಾಥ ಶೆಟ್ಟಿ ಮುನ್ಕೂರು ಆಟಿಯ ಬಗ್ಗೆ ತಿಳಿಸಿದರು. ಬಂಟ್ವಾಳ ಬಂಟರ ಸಂಘ ಕೋಶಾಧಿಕಾರಿ ಲೋಕೇಶ್‌ ಶೆಟ್ಟಿ ಕುಳ, ಬಂಟ್ವಾಳ ಬಂಟರ ಸಂಘ ಜೊತೆ ಕೋಶಾಧಿಕಾರಿ ವಿದ್ಯಾ ವಿ ರೈ, ಬಂಟ್ವಾಳ ಬಂಟರ ಸಂಘ ಜತೆ ಕಾರ್ಯದರ್ಶಿ ಶಿವಪ್ರಸಾದ್‌ ಶೆಟ್ಟಿ ಸಜೀಪ, ವಿಟ್ಲ ಪಡ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ನಾರಾಯಣ ಶೆಟ್ಟಿ ಕುಲ್ಯಾರ್‌ , ಬಂಟರ ಸಂಘ ಪ್ರಮುಖ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಹಿರಿಯ ನಾಟಕ ಕಲಾವಿದ ಸಂಕಪ್ಪರೈ ಮಲಾರುಬೀಡು ಇವರನ್ನು ಸನ್ಮಾನಿಸಲಾಯಿತು. ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇಕಡಾ 90% ಅಧಿಕ ಅಂಕ ಪಡೆದ ವಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. 2025ನೇ ಸಾಲಿನ ಅತ್ಯುತ್ತಮ ಸಂಶೋಧಕ ಎಂಬ ನೆಲೆಯಲ್ಲಿ ಅಧ್ಯಾಪಕ ಭೂಷಣ ಪ್ರಶಸ್ತಿ ಪಡೆದ ಡಾ| ಶಾಂತರಾಮ ರೈ ಸಿ ಮತ್ತು ರಾಜ್ಯಮಟ್ಟದ ಉತ್ತಮ ಶಿಕ್ಷಕಿ ವಿದ್ಯಾತರ್‍ನ ಪ್ರಶಸ್ತಿ ಪುತಸ್ಕೃತ ಶೈಲಜಾ ಬಿ ಶೆಟ್ಟಿ ಪಡೆಕುಂಜ, ಪಿಲಿಪಂಜ ತುಳು ಚಲನಚಿತ್ರ ನಿರ್ದೇಶಕ ಭರತ್‌ ಶೆಟ್ಟಿ ಕುಳಾಲು ಕೆದೆಮೂಲೆ ಇವರನ್ನು ಗೌರವಿಸಲಾಯಿತು.

ವಿಟ್ಲ-ಪಡ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನವಾಇ ಆಯ್ಕೆಯಾದ ವಲಯದ ಅಧ್ಯಕ್ಷ, ಉಪಾಧ್ಯಕ, ಮತ್ತು ನಿರ್ದೇಶಕರನ್ನು ಗೌರವಿಸಲಾಯಿತು. ವಿನುತಾ ವಿ ಶೆಟ್ಟಿ ಕೊಲ್ಲಾಡಿ ಪ್ರಸ್ತಾವಿಕದೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಉಪಾಧ್ಯಕ್ಷ ಸುದೇಶ್‌ ಭಂಡಾರಿ ಧನ್ಯವಾದಗೈದರು. ವಲಯದ ಬಂಟ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಧರ್ಮಚಾವಡಿ ತುಳು ಚಲನಚಿತ್ರದ ನಿರ್ದೇಶಕ, ನಿರ್ಮಾಪಕ, ಹಾಗೂ ಕಲಾವಿದರುನ್ನು ಗೌರವಿಸಲಾಯಿತು. ವಲಯ ಬಂಟ ಬಾಂಧವರು ಆಟಿಯ ವಿಶೇಷ ತಿಂಡಿ ತಿನಿಸುಗಳನ್ನು ತಯಾರಿಸಿ ತಂದರು. ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಬಂಟರ ಸಂಘ ಕಾರ್ಯದರ್ಶಿ ಸದಾನಂದ ಆಳ್ವ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಫರಂಗಿಪೇಟೆ ವಲಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಉದಯಕುಮಾರ್‌ ರೈ ಅಗರಿ ಅಧ್ಯಕ್ಷತೆ ವಹಿಸಿದ್ದರು. ಬಂಟರ ಸಂಘದ ಕಾರ್ಯಕಾರಿನಿ ಸದಸ್ಯ ಸಂದೇಶ್‌ ಶೆಟ್ಟಿ ಬಿಕ್ನಾಜೆ, ಶಶಿಧರ ರೈ ಕುಳಾಲಿ, ಜಾಗತಿಕ ಬಂಟರ ಸಂಘದ ಕಾರ್ಯಕಾರಿ ಸದಸ್ಯ ಅಮರೇಶ್‌ ಶೆಟ್ಟಿ ತಿತುವಾಜೆ ಮತ್ತು ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿವಿಧ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ಸಾಲೆತ್ತೂರು ವಲಯ ಬಂಟರ ಸಂಘ ಕಾರ್ಯದರ್ಶಿ ಅರವಿಂದ ರೈ ಮೂರ್ಜೆಬೆಟ್ಟು ಸ್ವಾಗತಿಸಿ, ಸಾಲೆತ್ತೂರು ವಲಯ ಬಂಟರ ಸಂಘ ಕೋಶಾಧಿಕಾರಿ ಪವಿತ್ರ ಪೂಂಜಾ ಕೊಡಂಗೆ ಧನ್ಯವಾದಗೈದರು.ಬಂಟ್ವಾಳ ಬಂಟರ ಸಂಘದಲ್ಲಿ ನಡೆದ ವಿಶಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಸಾಲೆತ್ತೂರು ವಲಯ ಬಂಟರ ಸಂಘದ ಮಕ್ಕಳಿಗೆ ಅಭಿನಂದನೆ ನೀಡಿ ಗೌರವಿಸಲಾಯಿತು.

- Advertisement -

Related news

error: Content is protected !!