Thursday, July 23, 2026
spot_imgspot_img
spot_imgspot_img

ಲಯನ್ಸ್ ಜಿಲ್ಲೆ 317 ಡಿ ವತಿಯಿಂದ ಈದ್ ಇ ಮೊಹಬತ್ ಕಾರ್ಯಕ್ರಮ

- Advertisement -
- Advertisement -

ಲಯನ್ಸ್ ಜಿಲ್ಲೆ 317 ಡಿ ವತಿಯಿಂದ ದಿನಾಂಕ 11.10.2025 ರಂದು ಮಂಗಳೂರಿನಲ್ಲಿ ಈದ್ ಇ ಮೊಹಬತ್ ಕಾರ್ಯಕ್ರಮವು ಮುಖ್ಯ ಕೊ ಆಡಿನೇಟರ್ ಅಬ್ದುಲ್ ಸಿದ್ಧಿಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜಿಲ್ಲಾ ರಾಜ್ಯಪಾಲರಾದ ಕುಡ್ಪಿ ಅರವಿಂದ ಶೆಣೈ ಅವರು ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಮಂಗಳೂರು ಟ್ರಾಫಿಕ್ ನ ಎ.ಸಿ.ಪಿ ಯವರಾದ ನಜ್ಮಾ ಫಾರುಕಿ ಅವರು ಈದ್ ಸಂದೇಶ ಮತ್ತು ಟ್ರಾಫಿಕ್ ನ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಪ್ರಮುಖ ಭಾಷಣಕಾರರಾಗಿ ಅಕಾಡೆಮಿಕ್ ಅಡ್ವಾಸರ್ ಆಗಿರುವ ಮಹಮ್ಮದ್ ರಫೀಕ್ ಅವರು ಈದ್ ನ ಸಂದೇಶ ಮತ್ತು ಈದ್ ನ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು.

ಸಮಾರಂಭದಲ್ಲಿ ನಿಕಟ ಪೂರ್ವ ರಾಜ್ಯಪಾಲರಾದ ಬಿ.ಎಂ.ಭಾರತಿ, ಮಾಜಿ ರಾಜ್ಯಪಾಲರಾದ ಪತ್ರಾವೊ, ದ್ವಿತೀಯ ರಾಜ್ಯಪಾಲರಾದ ಗೋವರ್ಧನ ಶೆಟ್ಟಿ, ಶುಭಸಂಶಾನೆ ಮಾಡಿದರು. ಸಮಾರಂಭದಲ್ಲಿ ಸಂಪುಟ ಕಾರ್ಯದರ್ಶಿ ಹೆಚ್.ಆರ್.ಚಂದ್ರೇಗೌಡ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ, ಸಾರ್ವಜನಿಕ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್, ಕ್ಯಾಬಿನೆಟ್ ಕೋ ಆಡಿನೇಟರ್ ಲ್ಯಾನ್ಸಿ ಮಸ್ಕರೇನಸ್ , ರಾಜ್ಯಪಾಲರ ಸಂಯೋಜಕಿ ಜ್ಯೋತಿ ಎಸ್ ಶೆಟ್ಟಿ, ಸಂಯೋಜಕರಾದ ಮನೋರಂಜನ್ ಕೆ.ಆರ್ ಲೋಕೇಶ್ ಉಲ್ಲಾಳ್, ಜಿಲ್ಲಾ ಅಧ್ಯಕ್ಷರುಗಳು, ಮಾಜಿ ರಾಜ್ಯಪಾಲರುಗಳು ಭಾಗವಹಿಸಿದರು. ಕಾರ್ಯಕ್ರಮವು ಅತ್ಯಂತ ಯಶಸ್ವಿಪೂರ್ಣವಾಗಿ ನಡೆಯಿತು.

- Advertisement -

Related news

error: Content is protected !!