Friday, April 26, 2024
spot_imgspot_img
spot_imgspot_img

ಪಬ್ ಜಿ ಮೊಬೈಲ್ ಇಂಡಿಯಾಗೆ ಕೇಂದ್ರದ ಒಪ್ಪಿಗೆ- ಶೀಘ್ರವೇ ಲಾಂಚ್ ಸಾಧ್ಯತೆ!!

- Advertisement -G L Acharya panikkar
- Advertisement -

ಬೆಂಗಳೂರು: ಕೇಂದ್ರದಿಂದ ಬ್ಯಾನ್ ಆಗಿದ್ದ ಪಬ್​ಜಿ ಈಗ ಪಬ್​ ಜಿ ಮೊಬೈಲ್ ಇಂಡಿಯಾ ಹೆಸರಿನಲ್ಲಿ ಕೇಂದ್ರ ಸರ್ಕಾರದ ಬಳಿ ನೋಂದಣಿ ಮಾಡಿಸಿಕೊಂಡಿದೆ. ಕಾರ್ಪೊರೇಟ್ ವಲಯಗಳ ಸಚಿವಾಲಯದಲ್ಲಿ ನೋಂದಣಿ ಮಾಡಿಸಿಕೊಂಡಿರುವ ಪಬ್​ಜಿ ಇದೀಗ ಗೇಮ್ ಲಾಂಚ್ ಮಾಡಲು ಮುಂದಾಗಿದೆ.

ಬೆಂಗಳೂರಿನಲ್ಲಿ ತನ್ನ ಕಚೇರಿಯನ್ನೂ ತೆರೆದಿದ್ದು ಈ ಗೇಮ್ ಮೊದಲ ಹಂತದಲ್ಲಿ ಕೇವಲ ಆ್ಯಂಡ್ರಾಯ್ಡ್ ಬಳಕೆದಾರರಿಗಷ್ಟೇ ಲಭ್ಯವಾಗಲಿದೆ ಎನ್ನುವ ಮಾಹಿತಿ ಇದೆ. ಬೆಂಗಳೂರಿನಲ್ಲಿಯೇ ಪಬ್​ಜಿ ಕಂಪನಿ ತನ್ನ ಕೇಂದ್ರ ಕಚೇರಿಯನ್ನು ತೆರೆಯಲಿದೆ ಎನ್ನುವ ಮಾಹಿತಿ ಇದೆ.

ಇನ್ನು ಕಂಪನಿಯ ಕಾರ್ಪೋರೇಟ್ ಡೆವಲೆಪ್​ಮೆಂಟ್ ಹೆಡ್​ಗಳಾಗಿ ಕುಮಾರ್ ಕೃಷ್ಣ ಅಯ್ಯರ್ ಮತ್ತು ಸಿಯಾನ್ ಎಂಬುವವರನ್ನ ಕಂಪನಿ ಆಯ್ಕೆ ಮಾಡಿದೆಯಂತೆ. ಈ ಹಿಂದೆ ಕೇಂದ್ರ ಬ್ಯಾನ್ ಮಾಡಿದ 118 ಆ್ಯಪ್​ಗಳ ಪೈಕಿ ಪಬ್​ಜಿ ಕೂಡ ಒಂದಾಗಿತ್ತು.

- Advertisement -

Related news

error: Content is protected !!