Wednesday, June 24, 2026
spot_imgspot_img
spot_imgspot_img

ಪಂಪ್‍ವೆಲ್ ಸೇತುವೆಯಿಂದ ಕೆಳಗೆ ಉರುಳಿದ ಕಾರು; ಪ್ರಾಣಾಪಾಯದಿಂದ ಪಾರದ ಪ್ರಯಾಣಿಕರು

- Advertisement -
- Advertisement -

ಮಂಗಳೂರು: ಪಂಪ್ ವೆಲ್‍ನಲ್ಲಿ ಮತ್ತೊಂದು ಕಾರು ಸೇತುವೆಯಿಂದ ಕೆಳಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಹೆಚ್ಚಿನ ಅಪಾಯಗಳಿಲ್ಲದೆ ಪಾರಾಗಿದ್ದಾರೆ.

ಮಾ. 21 ಭಾನುವಾರ ಪಂಪ್ವೆಲ್ ಮೇಲ್ಸೇತುವೆ ಮೇಲೆ ಸಾಗುತ್ತಿದ್ದ ಮಾರುತಿ ಸ್ವಿಪ್ಟ್ ಕಾರು ಮೇಲ್ಸೇತುವೆಯಿಂದ ಕೆಳಕ್ಕೆ ಉರುಳಿ ಬಿದ್ದಿದೆ. ಬೀಳುವಾಗ ಕಾರು ಉಲ್ಟಾ ಆಗಿ ಬಿದ್ದಿದ್ದು ಆದರ ನಾಲ್ಕು ಚಕ್ರಗಳು ಅಕಾಶಮುಖಿಯಾಗಿದ್ದವು .

ನಂತೂರು ಕಡೆಯಿಂದ ಪಂಪ್ವೆಲ್ ಕಡೆಗೆ ಚಲಿಸುತ್ತಿದ್ದ ಸ್ವಿಪ್ಟ್ ಡಿಸೈರ್ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆಳಕ್ಕೆ ಹಾರಿದೆ. ಕಾರಿನಲ್ಲಿದ್ದವರು ತರಚು ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನೆಗೆ ವೇಗದ ಚಾಲನೆಯೇ ಕಾರಣ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರಿ ಪೆÇಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!