Thursday, June 18, 2026
spot_imgspot_img
spot_imgspot_img

ವಿವಾಹಿತೆಯ ಮೇಲೆ ಪತಿಯ ಸಂಬಂಧಿ, ಆತನ ಸ್ನೇಹಿತನಿಂದಲೇ ಸಾಮೂಹಿಕ ಅತ್ಯಾಚಾರಗೈದು ಬರ್ಬರ ಹತ್ಯೆ!

- Advertisement -
- Advertisement -

ಪುಣೆ: 19 ವರ್ಷದ ವಿವಾಹಿತೆಯ ಮೇಲೆ ಪತಿಯ ಸಂಬಂಧಿ ಹಾಗೂ ಆತನ ಸ್ನೇಹಿತನೇ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯನ್ನು ಕೊಲೆಗೈದ ದಾರುಣ ಘಟನೆ ಪುಣೆಯ ಸಣ್ಣ ಗ್ರಾಮವೊಂದರಲ್ಲಿ ನಡೆದಿದೆ.

ಪತಿಯ ಸಂಬಂಧಿಯ ಜೊತೆ ವಿವಾಹಿತೆ ದೇಗುಲಕ್ಕೆ ತೆರಳಿದ್ದ ವೇಳೆಯಲ್ಲಿ ದೇವಸ್ಥಾನದ ಸಮೀಪದಲ್ಲಿ ಇಬ್ಬರು ಸೇರಿ ವಿವಾಹಿತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಇದಕ್ಕೆ ವಿರೋಧವೊಡ್ಡುತ್ತಿದ್ದಂತೆಯೇ ಆಕೆಯ ಕುತ್ತಿಗೆಗೆ ಸ್ಕಾರ್ಫ್​ ಬಿಗಿದು ಕೊಲೆಗೈದಿದ್ದಾರೆ. ಆಕೆಯ ಮುಖ ಪರಿಚಯ ಸಿಗಬಾರದು ಎಂಬ ಕಾರಣಕ್ಕೆ ಆಕೆಯ ಮುಖವನ್ನು ಛಿದ್ರಗೊಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ಪುಣೆಯ ಪಿಂಪ್ರಿ ಚಿಂಚ್​ವಾಡ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!