




ಪುತ್ತೂರು: ವೃತ್ತಿಪರ ಕೋಸ್೯ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2026ರಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ಮಾಡಿದ್ದಾರೆ.
ವಿಶಾಲ್ ಪಿ. ಇಂಜಿನಿಯರಿಂಗ್‌ನಲ್ಲಿ 194ನೇ ರ್‍ಯಾಂಕ್ ಪಡೆದು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವುದಲ್ಲದೇ ಅತ್ಯಧಿಕ ರ್‍ಯಾಂಕ್ ಗಳು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಮುಡಿಗೇರಿದೆ.
ಸನ್ನಿಧಿ ಕಲ್ಲೂರಾಯ (ಆರ್ಯಾಪಿನ ರಾಜೇಶ್ ಪಿ. ಹಾಗೂ ಕೃತಿ ಬಿ. ಜಿ. ದಂಪತಿ ಪುತ್ರಿ) ಬಿ.ಪಿ.ಒ.ದಲ್ಲಿ 606
ವೈಭವಿ ಎಸ್. ಕೆ. (ಬಂಟ್ವಾಳ ತಾಲೂಕಿನ ಕಾರ್ಯಾಡಿಯ ಕೆ. ಸುಂದರ ಹಾಗೂ ಸಿ. ಸುನಿತಾ ದಂಪತಿ ಪುತ್ರಿ)
ಬಿ.ಪಿ.ಟಿ., ಡಿಫಾರ್ಮ, ಬಿ.ಎಸ್ಸಿ. ಎ.ಹೆಚ್.ಸಿ.ಯಲ್ಲಿ 3166 ನೇ ರ್‍ಯಾಂಕ್ , ಕುಮಾರ್ ಆರ್. (ಮಂಡ್ಯದ ಕೆ. ಆರ್. ಪೇಟೆಯ ಆರ್. ರೂಪೇಶ್ ಹಾಗೂ ರೇಖಾ ದಂಪತಿ ಪುತ್ರ) ಬಿಪಿಒದಲ್ಲಿ 3712ನೇ ರ್‍ಯಾಂಕ್ ಪಡೆದಿದ್ದಾರೆ.
5000ದ ಒಳಗೆ ಸುಮಾರು 32 ವಿದ್ಯಾರ್ಥಿಗಳು ಪಡೆದುಕೊಂಡು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರನ್ನು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.








