Sunday, June 7, 2026
spot_imgspot_img
spot_imgspot_img

ಪುತ್ತೂರು: ಬೈಕ್ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಪ್ರಕರಣ; ಸವಾರನಿಗೆ ದಂಡ, ಮಾಲಕನಿಗೆ ಜೈಲು ಶಿಕ್ಷೆ..!

- Advertisement -
- Advertisement -

ಪುತ್ತೂರು: ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಗೆ ಬೈಕ್‌ ಢಿಕ್ಕಿ ಹೊಡೆದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲನಾ ಪರವಾನಿಗೆ ಇಲ್ಲದ ಬೈಕ್‌ ಸವಾರನಿಗೆ ಕೋರ್ಟ್ ದಂಡ ವಿಧಿಸಿದ್ದು, ಬೈಕ್ ಮಾಲಿಕನಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

2022ರ ಫೆ.27ರಂದು ನೆಟ್ಟಣಿಗೆಯ ಕೊಟ್ಯಾಡಿ ಎಂಬಲ್ಲಿ ಮುಳಿಯೂರು ನಿವಾಸಿ ಶಾಹೀದ್(24ವ)ರವರು ಚಲಾಯಿಸುತ್ತಿದ್ದ ಕೇರಳ ರಾಜ್ಯದ ನೋಂದಾವಣೆಯ ಬೈಕ್ ಕೊಟ್ಯಾಡಿ ರಸ್ತೆ ಬದಿಯಲ್ಲಿ ನಿಂತಿದ್ದ ಕೊಟ್ಯಾಡಿ ನಿವಾಸಿ ದುಗ್ಗಮ್ಮ (55ವ) ಎಂಬವರಿಗೆ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ದುಗ್ಗಮ್ಮ ಅವರು ಮೃತಪಟ್ಟಿದ್ದರು.ಬೈಕ್‌ನಲ್ಲಿದ್ದ ಸಹಸವಾರೆ ನೆಬಿಸಾ ಅವರು ಗಾಯಗೊಂಡಿದ್ದರು.ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸ್ ಠಾಣೆಯ ಆಗಿನ ಎಸ್.ಐ ರವಿ.ಬಿ.ಎಸ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಬೈಕ್‌ ಸವಾರ ಶಾಹೀದ್ ಅವರಿಗೆ ಚಾಲನಾ ಪರವಾನಿಗೆ ಇಲ್ಲದಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೈಕ್ ಮಾಲಕ ಮುಳಿಯೂರು ನಿವಾಸಿ ಮಹಮ್ಮದ್ ಶಾಕೀರ್ ಅವರ ವಿರುದ್ದವೂ ಪ್ರಕರಣ ದಾಖಲಿಸಿಕೊಂಡಿದ್ದರು.

ಬೈಕ್‌ ಸವಾರ ಶಾಹೀದ್ ವಿರುದ್ಧ ಸೆಕ್ಷನ್ 3(1)/ಆರ್‌ವೈಡಬ್ಲ್ಯಾರ್/ ಡ 181 ಐಎಮ್‌ವಿ ಮೋಟಾರು ಕಾಯ್ದೆಯಂತೆ ಮತ್ತು ಬೈಕ್‌ ಮಾಲಕ ಮಹಮ್ಮದ್ ಶಾಕೀರ್ ಅವರ ವಿರುದ್ಧ ಸೆಕ್ಷನ್ 279, 338, 304(ಎ)1 ರಂತೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಪುತ್ತೂರು ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶ ದೇವರಾಜ್ ವೈ.ಎಚ್. ಅವರು ಚಾಲನಾ ಪರವಾನಿಗೆ ಇಲ್ಲದ ಬೈಕ್ ಸವಾರ ಶಾಹೀದ್ ಅವರಿಗೆ ರೂ.5 ಸಾವಿರ ದಂಡ ವಿಧಿಸಿ,ಬೈಕ್ ಮಾಲಕ ಮಹಮ್ಮದ್ ಶಾಕೀರ್ ಅವರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ರೂ.5 ಸಾವಿರ ದಂಡ ವಿದಿಸಿ, ತೀರ್ಪು ನೀಡಿದರು ಪ್ರಾಸಿಕ್ಯೂಷನ್ ಪರ ಸಹಾಯಕ ಸರಕಾರಿ ಅಭಿಯೋಜಕಿ ಚೇತನಾದೇವಿ ವಾದಿಸಿದ್ದರು.

- Advertisement -

Related news

error: Content is protected !!