Monday, August 24, 2026
spot_imgspot_img
spot_imgspot_img

ಪುತ್ತೂರು: ಯುವತಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ; ತಾಯಿಯ ಮೇಲೆ ಹಲ್ಲೆ..!

- Advertisement -
- Advertisement -

ಪುತ್ತೂರು: ಯುವತಿಯೋರ್ವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುತಿದ್ದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಪುತ್ತೂರು ತಾಲೂಕು ಪಾಣಾಜೆ ಗ್ರಾಮದಲ್ಲಿ ನಡೆದಿದೆ.

ಆರೋಪಿಗಳನ್ನು ಬಾಬು, ಲಕ್ಷ್ಮಿ, ಹಾಗೂ ಗಿರೀಶ್ ಎಂದು ಗುರುತಿಸಲಾಗಿದೆ.

ಪುತ್ತೂರು ತಾಲೂಕು ಪಾಣಾಜೆ ಗ್ರಾಮ ಪುತ್ತೂರು ನಿವಾಸಿ ನವ್ಯಶ್ರೀ (19) ಇವರು ತನ್ನ‌ ಮನೆಯಲ್ಲಿರುವಾಗ, ಆರೋಪಿಗಳು ನವ್ಯಶ್ರೀ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದು, ಆ ಸಮಯದಲ್ಲಿ ಅವರ ತಾಯಿಗೆ ಹಲ್ಲೆ ನಡೆಸಿರುತ್ತಾರೆ. ಮತ್ತೋರ್ವ ಆರೋಪಿ ಗಿರೀಶ್ ರವರು ಕೂಡಾ ಹಲ್ಲೆ ನಡೆಸಿದ್ದು, ಬಳಿಕ 3 ಜನ ಆರೋಪಿತರು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ನೀಡಿದ ದೂರಿನ‌ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ 25-2024 ಕಲಂ:- 323,504,506 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!