Thursday, July 30, 2026
spot_imgspot_img
spot_imgspot_img

ಪುತ್ತೂರು: ಕಾರೊಂದರ ಟಯರ್ ಸಿಡಿದು ಧರೆಗೆ ಡಿಕ್ಕಿ ಹೊಡೆದು ಪಲ್ಟಿ- ಪುತ್ತೂರು ಚೇತನಾ ಸ್ಟುಡಿಯೋ ಮಾಲಕರ ಪತ್ನಿ ಮತ್ತು ಪುತ್ರಿ ಸೇರಿದಂತೆ ಹಲವರಿಗೆ ಗಾಯ!

- Advertisement -
- Advertisement -

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಆನೆಗುಂಡಿ ಬಳಿ ಕಾರೊಂದರ ಟಯರ್ ಸಿಡಿದು ಧರೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿಯಾಗಿ ಕಾರಿನಲ್ಲಿದ್ದ ಪುತ್ತೂರು ಚೇತನಾ ಸ್ಟುಡಿಯೋ ಮಾಲಕರ ಪತ್ನಿ ಮತ್ತು ಪುತ್ರಿ ಸೇರಿದಂತೆ ಹಲವಾರಿಗೆ ಗಾಯವಾದ ಘಟನೆ ಇಂದು ನಡೆದಿದೆ.

ಚೇತನಾ ಸ್ಟುಡಿಯೋ ಮಾಲಕ ಅಶೋಕ್ ಕುಂಬ್ಳೆ ಅವರು ಮನೆ ಮಂದಿ ಸಮೇತ ತಮ್ಮ ಕಾರಿನಲ್ಲಿ ಪುತ್ತೂರಿಗೆ ಬರುತ್ತಿದ್ದ ವೇಳೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿ ಬಳಿ ಕಾರಿನ ಟಯರ್ ಸಿಡಿದು ಧರೆಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ.

ಕಾರಿನಲ್ಲಿದ್ದ ಆಶೋಕ್ ಕುಂಬ್ಳೆ ಅವರ ಪತ್ನಿ ಶೋಭ ಅವರ ಪುತ್ರಿ ಹಾಗೂ ಅಣ್ಣನ ಪತ್ನಿ ಸೂರ್ಯಕಲಾ ರವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!