Saturday, August 1, 2026
spot_imgspot_img
spot_imgspot_img

ಪುತ್ತೂರು: ಕಲ್ಲರ್ಪೆ ಚಿನ್ನು ಹೋಟೆಲ್ ಮಾಲಕ ಮೋಹನ್ ಆತ್ಮಹತ್ಯೆಗೆ ಶರಣು

- Advertisement -
- Advertisement -

ಖಾಸಗಿ ಹೋಟೆಲ್ ಮಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುರಿಯ ಗ್ರಾಮದ ಮಲಾರ್ ನಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಯನ್ನು ಕಲ್ಲರ್ಪೆ ಚಿನ್ನು ಹೋಟೆಲ್ ಮಾಲಕ ಮೋಹನ್ [38) ಎಂದು ಗುರುತಿಸಲಾಗಿದೆ.

ಮಲಾರಿನ ತನ್ನ ಮನೆಯ ಒಳಗಡೆಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಡೆತ್ ನೋಟ್ ನಲ್ಲಿ ಸಾಲಬಾಧೆಯೇ ತನ್ನ ಸಾವಿಗೆ ಕಾರಣ ಎಂದು ಬರೆದಿಟ್ಟಿದ್ದಾರೆ.ನೆರೆಯ ಮನೆಯಲ್ಲಿ ಕಾರ್ಯಕ್ರಮಕ್ಕೆಂದು ಮನೆಯವರು ಹೋಗಿದ್ದ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿಗೆ. ಸಂಜೆ 4 ಗಂಟೆ ಸುಮಾರಿಗೆ ಮನೆಯವರು ಮನೆಗೆ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ.ಮೃತರು ತಾಯಿ ಪುಷ್ಪ ಪತ್ನಿ ಪ್ರೇಮಾ ಹಾಗೂ 4 ವರ್ಷದ ಮಗು ಹಂಸಿಕಾ ಅವರನ್ನು ಅಗಲಿದ್ದಾರೆ.

- Advertisement -

Related news

error: Content is protected !!