





ಪುತ್ತೂರು ನಗರಸಭಾ ವ್ಯಾಪ್ತಿಯ ಕೋರ್ಟು ರಸ್ತೆ – ಬೀದಿಮಜಲು ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಗೆ ಹೋಗುವ ರಸ್ತೆ ಕಾಂಕ್ರೀಟುಕರಣಕ್ಕೆ ಪುತ್ತೂರಿನ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಯ್ ದೆ ದೇವುಸ್ ಚರ್ಚ್ ನ ಧರ್ಮಗುರುಗಳಾದ ಅತೀ ವಂದನೀಯ ಲಾರೆನ್ಸ್ ಮಸ್ಕರೇನಸ್ ರವರು ಮಾತನಾಡಿ ರಸ್ತೆ ಅಭಿವೃದ್ದಿಗೆ ಸುಮಾರು 10 ಲಕ್ಷ ಬಿಡುಗಡೆ ಮಾಡಿದ ಮಾನ್ಯ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತಾ ಮಾನ್ಯ ಶಾಸಕರು ಯಾವುದೇ ಸ್ವಾರ್ಥ ಇಲ್ಲದೆ, ಬಡವರಿಗೆ ಸಹಾಯವಾಗಬೇಕು, ಪುತ್ತೂರು ಪ್ರದೇಶದಲ್ಲಿ ಅಭಿವೃದ್ಧಿಯಾಗಬೇಕು, ಭ್ರಷ್ಟಾಚಾರ ನಿರ್ಮೂಲನೆ ಯಾಗಬೇಕು ಎಂದು ನಿಸ್ವಾರ್ಥೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ, ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ದೇವರು ಕರುಣಿಸಲಿ ಎಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಶಾಸಕರು ಮಾತನಾಡಿ, ಪುತ್ತೂರಿನಲ್ಲಿ ದೊಡ್ಡ ದೊಡ್ಡ ಉದ್ಯಮಗಳು ನಿರ್ಮಾಣ ಆಗ್ಬೇಕಾಗಿದೆ, ಇದರಿಂದ ಉದ್ಯೋಗ ಸೃಷ್ಟಿ ಯಾಗಲಿದೆ, ಈಗಾಗಲೇ ಸುಮಾರು ಒಂದು ಸಾವಿರ ಕೋಟಿ ಹೂಡಿಕೆ ಮಾಡಲು ಉದ್ಯಮಿಗಳು ಸಂಪರ್ಕಿಸಿದ್ದಾರೆ. ನಾನು ವರ್ಷಕ್ಕೆ ಐದು ಕೋಟಿ ದುಡಿತ್ತಿದ್ದೆ ಅದನ್ನೆಲ್ಲಾ ಬಿಟ್ಟು ಸಮಾಜದ ಕೆಲಸ ಜನರ ಸೇವೆ ಮಾಡಬೇಕೆಂದು ಬಂದಿದ್ದೇನೆ. ಭ್ರಷ್ಟಾಚಾರ ರಹಿತವಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಲು ನಿಮ್ಮೆಲ್ಲಾ ಆಶೀರ್ವಾದ ಇರಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ಮಾಯ್ ದೆ ದೇವುಸ್ ಚರ್ಚ್ ನ ಧರ್ಮಗುರುಗಳಾದ ಅತೀ ವಂದನೀಯ ಲಾರೆನ್ಸ್ ಮಸ್ಕರೇನಸ್, ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ತಾ, ಕಾರ್ಯದರ್ಶಿ ಎವ್ಲಿನ್ ಡಿಸೋಜಾ, ಇಪ್ಪತ್ತು ಆಯೋಗದ ಅಧ್ಯಕ್ಷ ಜೋನ್ ಡಿಸೋಜಾ, ಸೈಂಟ್ ಬ್ರಿಜಿಟೈನ್ ಕಾನ್ವೆಂಟ್ ನ ಧರ್ಮ ಭಗಿಣಿಯರು, ಪುತ್ತೂರು ನಗರ ಸಭಾ ಅಧ್ಯಕ್ಷ ಮಹಮ್ಮದ್ ಆಲಿ, ರಾಧಾ ಡ್ರೆಸಸ್ಸ್ ನ ಮಾಲಕ ಪ್ರಕಾಶ್ ಕಾಮತ್ ಮತ್ತು ಸಿಬ್ಬಂದಿ, ಮಾಜಿ ತಹಶಿಲ್ದಾರ್ ಜೆ.ಪಿ ರೊಡ್ರಿಗಸ್, ಪಾವ್ಲ್ ಹೆರಾಲ್ಡ್ , ಕ್ಲಾಮೆಂಟ್ ಪಿಂಟೋ ಇನ್ನಿತರು ಉಪಸ್ಥಿತರಿದ್ದರು.








