Tuesday, June 30, 2026
spot_imgspot_img
spot_imgspot_img

ಪುತ್ತೂರು: ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ ವ್ಯಕ್ತಿ ನರ್ಸ್ ನ ಮೊಬೈಲ್ ಫೋನ್ ಎಗರಿಸಿ ಪರಾರಿ; ಆರೋಪಿಯ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಪುತ್ತೂರು: ನರ್ಸ್ ಒಬ್ಬರ ಮೊಬೈಲ್ ಫೋನ್ ನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ವ್ಯಕ್ತಿ ಕಳ್ಳವುಗೈದ ಘಟನೆ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಜೋಡುಕಟ್ಟೆ ನಿವಾಸಿ ಅಕ್ಷತಾ ರವರು ಏ.24 ರಂದು ರಾತ್ರಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಸ್ಟಾಫ್ ರೂಮ್ ನಲ್ಲಿ ಮೊಬೈಲ್ ಫೋನ್ ಅನ್ನು ಚಾರ್ಜ್ ಗೆ ಹಾಕಿ ತೆರಳಿದ್ದು, ವಾಪಸ್ಸು ಬಂದು ನೋಡಿದಾಗ ಮೊಬೈಲ್ ಫೋನ್ ಕಳ್ಳತನವಾಗಿತ್ತು.

ಸುಮಾರು 23,000 ರೂ. ಮೌಲ್ಯ ಮೊಬೈಲ್ ಫೋನ್ ಅನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಸಾಜಿ ಮಾಧವನ್ ಎಂಬ ವ್ಯಕ್ತಿ ಕಳ್ಳವುಗೈದಿದ್ದು, ಈ ಬಗ್ಗೆ ಅಕ್ಷತಾ ನೀಡಿರುವ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ: 69/2021 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!