Sunday, October 6, 2024
spot_imgspot_img
spot_imgspot_img

ಪುತ್ತೂರು: ಪಂಚೋಡಿಯಲ್ಲಿ ತಡರಾತ್ರಿ ಗ್ಯಾಂಗ್‌ವಾರ್‌: ಇಬ್ಬರ ಬಂಧನ..!

- Advertisement -
- Advertisement -

ಚರಣ್ ರೈ ಕೊಲೆ ಆರೋಪಿ ರಾಕೇಶ್ ಪಂಚೋಡಿ ಮತ್ತು ಇತರರು ಪರಾರಿ

ಪುತ್ತೂರು: ಸಾರ್ವಜನಿಕ ರಸ್ತೆಯಲ್ಲಿ ಶಾಂತಿ ಭಂಗವಾಗುವಂತೆ ಪರಸ್ಪರ ಅವಾಚ್ಯ ಶಬ್ಧಗಳಿಂದ ಬೈದುಕೊಂಡು, ಕೈ ಕೈ ಮಿಲಾಯಿಸಿಕೊಂಡು, ಮಾರಕ ಆಯುಧ ಬಳಸಿ ಸಾರ್ವಜನಿಕ ಸ್ಥಳದಲ್ಲಿ ಕಲಹವನ್ನುಂಟು ಮಾಡಿದ ಘಡನೆ ಪುತ್ತೂರು ತಾಲೂಕು, ನೆಟ್ಟಣಿಗೆ ಮೂಡ್ನೂರು ಗ್ರಾಮದ, ಪಂಚೋಡಿ ಎಂಬಲ್ಲಿ ನಡೆದಿದೆ.

ರಾತ್ರಿ ವೇಳೆ ಪುತ್ತೂರು ತಾಲೂಕು, ನೆಟ್ಟಣಿಗೆ ಮೂಡ್ನೂರು ಗ್ರಾಮದ, ಪಂಚೋಡಿ ಎಂಬಲ್ಲಿ ಸಾರ್ವಜನಿಕ ರಸ್ತೆಯ ಬಳಿ ರಾಜೇಶ್ ಪಂಚೋಡಿ, ಪ್ರವೀಶ್ ನಾಯರ್, ರಾಕೇಶ್ ಪಂಚೋಡಿ, ಜಯರಾಜ್, ಪ್ರಜ್ವಲ್ ಮಡ್ಯಾಳ ಮಜಲು, ಚರಣ್ ಮಡ್ಯಾಳ ಮಜಲು, ಸಂಜನ್ ರೈ ಮತ್ತು ಇತರರು ಪರಸ್ಪರ ಬೈದಾಡಿಕೊಂಡು ಹೊಡೆದಾಟ ನಡೆಸುತ್ತಿದ್ದು, ಆರೋಪಿತರ ಪೈಕಿ ರಾಕೇಶ್ ಪಂಚೋಡಿ ಎಂಬಾತನು ತಲ್ವಾರನ್ನು ಹಿಡಿದುಕೊಂಡು ಹಲ್ಲೆಗೆ ಯತ್ನಿಸುತ್ತಿದ್ದಾಗ, ಸ್ಥಳಕ್ಕೆ ತೆರಳಿದ ಜಂಬೂರಾಜ್ ಬಿ ಮಹಾಜನ್ ಪಿಎಸ್ಐ ಪುತ್ತೂರು ಗ್ರಾಮಾಂತರ ಠಾಣೆರವರು ಠಾಣಾ ಸಿಬ್ಬಂದಿಗಳು ಹಾಗೂ ಹೋಮ್ ಗಾರ್ಡ್ ಸೇರಿ, ಆತನ ಕೈಯಿಂದ ತಲ್ವಾರನ್ನು ಕಸಿದುಕೊಂಡಿರುತ್ತಾರೆ. ಬಳಿಕ ರಾಜೇಶ್ ಪಂಚೋಡಿ ಮತ್ತು ಸಂಜನ್ ರೈ ರವರನ್ನು ವಶಕ್ಕೆ ಪಡೆದುಕೊಂಡಿದ್ದು ಉಳಿದವರು ಪರಾರಿಯಾಗಿರುತ್ತಾರೆ.

ಈ ಬಗ್ಗೆ ಆರೋಪಿಗಳಾದ ರಾಜೇಶ್ ಪಂಚೋಡಿ, ಪ್ರವೀಶ್ ನಾಯರ್, ರಾಕೇಶ್ ಪಂಚೋಡಿ, ಜಯರಾಜ್, ಪ್ರಜ್ವಲ್ ಮಡ್ಯಾಳ ಮಜಲು, ಚರಣ್ ಮಡ್ಯಾಳ ಮಜಲು, ಸಂಜನ್ ರೈ ಮತ್ತು ಇತರರ ಮೇಲೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ : 90 /2024 ಕಲಂ: 194(2) BNSS 352,R/W 190BNS 25(1B)(B) ARMS ACT ರಂತೆ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!