Thursday, July 30, 2026
spot_imgspot_img
spot_imgspot_img

ಪುತ್ತೂರು: ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮನೆ – ಮನೆಗೆ ಬಂದು ಕೋವಿಡ್ ತಪಾಸಣೆ!

- Advertisement -
- Advertisement -

ಪುತ್ತೂರು: ಒಳಮೊಗ್ರು ಗ್ರಾಮದ ಕೈಕಾರ ಎಂಬಲ್ಲಿ ಮಹಿಳೆಗೆ ಕೊರೋನಾ ಪಾಸಿಟಿವ್ ಬಂದ ಮಾಹಿತಿ ತಿಳಿದ ತಕ್ಷಣ ಗ್ರಾಮ ಪಂಚಾಯಿತಿ ವತಿಯಿಂದ ಪಾಸಿಟಿವ್ ಬಂದ ಮನೆಯವರಿಗೆ ಮತ್ತು ಹತ್ತಿರದ ಎರಡು ಮನೆಯ ಎಲ್ಲಾ ಸದಸ್ಯರಿಗೆ ಕೋವಿಡ್ ಟೆಸ್ಟ್ ಅವರ ಮನೆಯಲ್ಲಿಯೇ ಮಾಡಲಾಯಿತು.

ಟೆಸ್ಟ್ ರಿಪೋರ್ಟ್ ಬರುವವರೆಗೆ ಯಾರು ಮನೆಯಿಂದ ಹೊರಗೆ ಹೋಗಬಾರದು ಎಂಬ ಸಲಹೆಯನ್ನು ನೀಡಿದ್ದರು. ಮೂರು ಮನೆಯವರೆಗೂ ದಿನಬಳಕೆಯ ವಸ್ತುಗಳನ್ನು ನೀಡಿ ಮನೆಯವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಿದ್ದು, ಗ್ರಾಮಸ್ಥರು ಯಾರೂ ಆತಂಕಪಡುವ ಅವಶ್ಯಕತೆ ಇಲ್ಲವೆಂದು ತಿಳಿಸಿದರು.

- Advertisement -

Related news

error: Content is protected !!