Friday, April 19, 2024
spot_imgspot_img
spot_imgspot_img

ಪುತ್ತೂರು: ವಿದ್ಯಾಮಾತಾ ಅಕಾಡೆಮಿಯಲ್ಲಿ ಉಚಿತ ಕಂಪ್ಯೂಟರ್ ತರಗತಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪ್ರಾರಂಭ

- Advertisement -G L Acharya panikkar
- Advertisement -

ಬ್ಯಾಂಕಿಂಗ್, ಪೊಲೀಸ್ ನೇಮಕಾತಿಯಿಂದ ಹಿಡಿದು ಅತ್ಯುನ್ನತ ಐಎಎಸ್ (ಭಾರತೀಯ ನಾಗರಿಕ ಸೇವೆಗಳು) ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪುತ್ತೂರಿನ ಏಕೈಕ ತರಬೇತಿ ಅಕಾಡೆಮಿಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಬ್ಯಾಂಕಿಂಗ್ ( ರಾಷ್ಟ್ರೀಕೃತ / ಗ್ರಾಮೀಣ ಬ್ಯಾಂಕ್, ಕೆ.ಯಂ.ಎಫ್ ಸೇರಿದಂತೆ ಎಲ್ಲಾ ಸಹಕಾರಿ ಸಂಘಗಳು, ಕ್ಯಾಂಪ್ಕೋ ನೇಮಕಾತಿ ಪರೀಕ್ಷೆ).

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಸಿಬ್ಬಂದಿ ಆಯ್ಕೆ ಆಯೋಗ), ಪೊಲೀಸ್ ಸಬ್ ಇನ್ಸ್ ಪೆಕ್ಟರ್ / ಕಾನ್ಸ್ಟೇಬಲ್) , ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಕಾರ್ಯದರ್ಶಿ (ಗ್ರೇಡ್-1 & ಗ್ರೇಡ್-2) ನೇಮಕಾತಿಗಳಿಗೆ ಸಂಬಂಧಿಸಿದ ಪರೀಕ್ಷೆಗಳ ತರಬೇತಿಯು ಪ್ರಾರಂಭಗೊಂಡಿದ್ದು, ಸದ್ಯ ಓದು ಮುಗಿಸಿರುವ / ಸದ್ಯ ಓದುತ್ತಿರುವ / ಉದ್ಯೋಗದಲ್ಲಿರುವವರು ಈ ತರಬೇತಿಯನ್ನು ಪಡೆದುಕೊಳ್ಳಬಹುದು.

ಈ ತರಬೇತಿಯನ್ನು ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ಕಂಪ್ಯೂಟರ್ ತರಬೇತಿಯನ್ನು ಉಚಿತವಾಗಿ ವಿದ್ಯಾಮಾತಾ ಅಕಾಡೆಮಿಯ ಮಾತೃಸಂಸ್ಥೆಯಾದ ‘ವಿದ್ಯಾಮಾತಾ ಫೌಂಡೇಶನ್ ‘ನ ಸಹಯೋಗದಲ್ಲಿ ನೀಡಲಾಗುವುದು.

ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರವೇಶಾತಿಯಲ್ಲಿ ಗ್ರಾಮೀಣ / ಕನ್ನಡ ಮಾಧ್ಯಮ / ಬಿಪಿಎಲ್ / ಅಂತ್ಯೋದಯ ಕಾರ್ಡುದಾರರಿಗೆ ಕೇವಲ ತರಬೇತುದಾರರ ಗೌರವಧನವನ್ನಷ್ಟೇ ವಿಧಿಸಲಾಗುವುದು. ಆಫ್ಲೈನ್ ತರಗತಿಗಳು ವಾರದ 4 ದಿನ (ಬೆ.9 ರಿಂದ 3 ರ ವರೆಗೆ) ಹಾಗೂ ಆನ್ಲೈನ್ ತರಗತಿಗಳು (ರಾತ್ರಿ 7 ರಿಂದ 9ರವರೆಗೆ) ಲಭ್ಯವಿರುತ್ತದೆ.

ವಾರಾಂತ್ಯದಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಪರೀಕ್ಷೆಗಳು, ಉಚಿತ ಕಾರ್ಯಾಗಾರಗಳು, ದಿನನಿತ್ಯದ ಖಾಸಗಿ / ಸರಕಾರಿ ಉದ್ಯೋಗಗಳ ಮಾಹಿತಿಗಳು ಮತ್ತು ದಿನನಿತ್ಯದ ಪ್ರಚಲಿತ ವಿದ್ಯಮಾನಗಳ PDF ಗಳನ್ನು ಉಚಿತವಾಗಿ ನೀಡಲಾಗುವುದು. ಪ್ರವೇಶಾತಿಯನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಎಲ್ಲಾ ನೇಮಕಾತಿಯ ಅರ್ಜಿಗಳನ್ನು ಉಚಿತವಾಗಿ ಹಾಕಿಕೊಡಲಾಗುತ್ತದೆ ಮತ್ತು ಪರೀಕ್ಷೆಯ ಪ್ರವೇಶ ಪತ್ರ (ಹಾಲ್ ಟಿಕೆಟ್) ವರೆಗಿನ ಎಲ್ಲಾ ಮಾಹಿತಿಗಳನ್ನು ಒದಗಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ:
ವಿದ್ಯಾಮಾತಾ ಅಕಾಡೆಮಿ ಹಿಂದೂಸ್ತಾನ್ ಕಾಂಪ್ಲೆಕ್ಸ್,ಒಂದನೇ ಮಹಡಿ,ಎಪಿಯಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ ಪುತ್ತೂರು ದ.ಕ 574201
ಫೋನ್: 9620468869 / 8590773486 / 9148935808 ನ್ನು ಸಂಪರ್ಕಿಸಬಹುದು.

- Advertisement -

Related news

error: Content is protected !!