Wednesday, July 22, 2026
spot_imgspot_img
spot_imgspot_img

ರಾಮನಗರ: ಬೇರೆ ಹುಡುಗಿ ಜೊತೆ ಸಂಪರ್ಕ ಶಂಕೆ; ಜಿಮ್‌ ಟ್ರೈನರ್‌ಗೆ ಚಾಕು ಇರಿದ ಪ್ರೇಯಸಿ

- Advertisement -
- Advertisement -

ರಾಮನಗರ: ಬಿಡದಿಯ ಸಿಲ್ಕ್ ಫಾರ್ಮ್ ಕ್ವಾಟ್ರಸ್ ಬಳಿ ಜಿಮ್ ಟ್ರೈನರ್‌ ಗೆ ತನ್ನ ಪ್ರೇಯಸಿಯೇ ಚಾಕು ಇರಿದಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ವೇಣುಗೋಪಾಲ್(27) ಚಾಕು ಇರಿತಕ್ಕೊಳಗಾದ ಯುವಕ. ಸುಧಾ (30) ಚಾಕು ಇರಿದಿರುವ ಪ್ರೇಯಸಿ. ಕಳೆದ 5-6 ವರ್ಷಗಳಿಂದ ವೇಣುಗೋಪಾಲ್ ಹಾಗೂ ಸುಧಾ ಪ್ರೀತಿ ಮಾಡುತ್ತಿದ್ದು, ಕಳೆದ ಕೆಲ ದಿನಗಳಿಂದ ವೇಣುಗೋಪಾಲ್ ಸುಧಾಳಿಂದ ಅಂತರ ಕಾಯ್ದುಕೊಂಡಿದ್ದ ಎನ್ನಲಾಗಿದೆ.

ಅಲ್ಲದೇ ಬೇರೊಂದು ಯುವತಿ ಜೊತೆ ಸಂಪರ್ಕದಲ್ಲಿದ್ದಾನೆ ಎಂದು ಕೋಪಗೊಂಡು, ಯುವಕನನ್ನ ಮನೆ ಬಳಿ‌ ಕರೆಸಿಕೊಂಡು ಚಾಕು ಇರಿದಿದ್ದಾಳೆ. ಚಾಕು ಇರಿದ ಬಳಿಕ ಸುಧಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ.

ಯುವಕನಿಗೆ ಬಿಡದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ

- Advertisement -

Related news

error: Content is protected !!