Thursday, April 25, 2024
spot_imgspot_img
spot_imgspot_img

ಚಲಾವಣೆಯಲ್ಲಿರಲಿವೆ 100, 10, 5 ರೂ.ಗಳ ಹಳೆ ನೋಟು: ಸ್ಪಷ್ಟನೆ ನೀಡಿದ ಆರ್ ಬಿ ಐ

- Advertisement -G L Acharya panikkar
- Advertisement -

ಮುಂಬೈ: 100, 10 ಮತ್ತು 5 ರೂಪಾಯಿ ಹಳೆ ಸೀರಿಸ್ ನೋಟಿನ ಚಲಾವಣೆ ಕುರಿತಂತೆ ಆರ್ ಬಿ ಐ ಸ್ಪಷ್ಟೀಕರಣ ನೀಡಿದೆ. ಹಳೆಯ ಎಲ್ಲ ಸೀರಿಸ್ ನೋಟುಗಳು ಚಲಾವಣೆಯಲ್ಲಿ ಇರಲಿದೆ. ಅವುಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವ ಕುರಿತಂತೆ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ ಎಂದು ಆರ್ ಬಿ ಐ ಸ್ಪಷ್ಟಪಡಿಸಿದೆ.

ಈ ಕುರಿತಂತೆ ಮಾಧ್ಯಮಗಳಲ್ಲಿ ತಪ್ಪಾದ ವರದಿ ಪ್ರಕಟವಾಗಿದೆ. ಹಳೆಯ ಸೀರಿಸ್ ನೋಟುಗಳ ಹಿಂತೆಗೆತದ ಪ್ರಸ್ತಾಪ ಇದೆ. ಅದನ್ನು ಹಂತ ಹಂತವಾಗಿ ಜಾರಿಗೊಳಿಸಲು ಉದ್ದೇಶಿಸಿದ್ದೇವೆ. ಆದರೆ ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಿಲ್ಲ ಎಂದು ಆರ್ ಬಿ ಐ ಸ್ಪಷ್ಟಪಡಿಸಿದೆ.

10 ಮತ್ತು 20 ರೂಪಾಯಿ ನಾಣ್ಯಗಳು ಕೂಡ ಮಾನ್ಯತೆ ಹೊಂದಿದ್ದು, ಅವುಗಳ ಬಳಕೆಗೆ ಹಿಂದೇಟು ಹಾಕಬಾರದು ಎಂದು ಆರ್ ಬಿ ಐ ಜನರಲ್ಲಿ ಮನವಿ ಮಾಡಿದೆ.

- Advertisement -

Related news

error: Content is protected !!