- Advertisement -
- Advertisement -
ಬೆಂಗಳೂರು: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ದಾಖಲೆ ಕಂಡು ಬಂದಿದೆ. ಷೇರುಪೇಟೆ ಸೂಚ್ಯಂಕ 50 ಸಾವಿರದ ಗಡಿ ದಾಟಿದೆ. ಕೊವಿಡ್ ಹೊಡೆತದ ನಡುವೆಯೂ ಷೇರುಪೇಟೆ ಹೊಸ ಮೈಲುಗಲ್ಲು ದಾಟಿದೆ.
ಮಹಾಮಾರಿ ಕೊರೊನಾ ನಡುವೆಯೂ ಷೇರುಪೇಟೆ ಸೂಚ್ಯಂಕ 50 ಸಾವಿರದ ಗಡಿ ದಾಟುವ ಮೂಲಕ ದಾಖಲೆ ಬರೆದಿದೆ. ಷೇರುಪೇಟೆ ಸೂಚ್ಯಂಕ 50,096ಕ್ಕೆ ಏರಿಕೆಯಾಗಿದ್ದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ನರೇಂದ್ರ ಮೋದಿ 2019ರಲ್ಲಿ ಅಧಿಕಾರಕ್ಕೇರಿದಾಗ 38,000 ಸೂಚ್ಯಂಕ ಇತ್ತು. ಈಗ ಕೊವಿಡ್ ಸಂಕಟದ ಮಧ್ಯೆಯೂ ಷೇರುಪೇಟೆ ಚಿಗುರಿದೆ.
ಜೋ ಬೈಡೆನ್ ಅತ್ತ ಅಮೆರಿಕಾದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇಂದು ಭಾರತೀಯ ಷೇರು ಪೇಟೆಯಲ್ಲಿ ನವ ಚೈತನ್ಯ ಪುಟಿದೆದ್ದಿದೆ. ಜೋ ಬೈಡೆನ್ ಅಧ್ಯಕ್ಷರಾಗುವ ಮೂಲಕ ಅಮೆರಿಕದಲ್ಲಿ ಅಸ್ಥಿರತೆ ದೂರವಾಗಿದ್ದು, ಹೊಸ ಯುಗಕ್ಕೆ ನಾಂದಿ ಹಾಡಿದಂತಿದೆ.
- Advertisement -